ADVERTISEMENT

‘ಭೀಮಾಂತರಂಗ ಮಾಲಿಕೆ–2’ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:45 IST
Last Updated 5 ಮಾರ್ಚ್ 2025, 15:45 IST

ಇಂಡಿ: ಇಲ್ಲಿನ ಭೀಮಾಂತರಂಗ ಆನ್‌ಲೈನ್ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರ ವತಿಯಿಂದ ಭೀಮಾಂತರಂಗ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ‘ಭೀಮಾಂತರಂಗ ಉಪನ್ಯಾಸ ಮಾಲಿಕೆ– 2’ ಕೃತಿ ಮಾರ್ಚ್ 8 ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಾಡಿನ ಹಿರಿಯ ಕಾದಂಬರಿಕಾರ ಅಥಣಿಯ ಬಾಳಾಸಾಹೇಬ ಲೋಕಾಪುರ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅಧ್ಯಕ್ಷ ಬಸವರಾಜ ಕುಮಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಹಿರಿಯ ಸಾಹಿತಿ ಡಿ.ಎನ್. ಅಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕೃತಿಯ ಸಂಪಾದಕ ಮಂಡಳಿ ರಾಘವೇಂದ್ರ ಕುಲಕರ್ಣಿ, ಸಿ.ಎಂ. ಬಂಡಗರ, ಗೀತಯೋಗಿ, ವೈ.ಜಿ. ಬಿರಾದಾರ, ಸಂತೋಷ ಬಂಡೆ ಭಾಗವಹಿಸುವರು. ಜಗಲಿ ಕೇಂದ್ರದ ಸದಸ್ಯರಾದ ಶ್ರೀಧರ ಹಿಪ್ಪರಗಿ, ಬಸವರಾಜ ಕಿರಣಗಿ, ವೀರಣ್ಣ ದಸ್ತರಡ್ಡಿ, ಬಿ.ಸಿ ಭಗವಂತಗೌಡರ, ಎಸ್.ಕೆ ಮಾವಿನಮರ, ಮಾಧ್ಯಮ ಸಲಹೆಗಾರರಾದ ಉಮೇಶ ಕೊಳೇಕರ, ಖಾಜು ಶಿಂಗೆಗೋಳ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.