ದೃಷ್ಟಿ ಜೈನ್
ವಿಜಯಪುರ: ನವೆಂಬರ್‌ನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ನಗರದ ದೃಷ್ಟಿ ಜೈನ್ ಅವರು ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ 474 ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ 11ನೇ ರ‍್ಯಾಂಕ್ ಗಳಿಸಿದ್ದಾರೆ.
‘ಸಿಎ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ರ‍್ಯಾಂಕ್ ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಕಠಿಣ ಶ್ರಮ ಹಾಕಿದ್ದೆ. ಇದೀಗ ಯಶಸ್ಸು ಲಭಿಸಿದೆ. ದೊಡ್ಡ ಕಂಪನಿಯೊಂದರಲ್ಲಿ ಉದ್ಯೋಗ ಮಾಡುವ ಗುರಿ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಜಯಪುರ ನಗರದ ಆಜಾದ್ ರಸ್ತೆಯ ‘ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿ’ಯ ಮಾಲೀಕರಾದ ವಿಶಾಲ್ ಜೈನ್ ಅವರ ಪುತ್ರಿಯಾದ ದೃಷ್ಟಿ ಜೈನ್ ನಗರದ ಬಿ.ಎಂ.ಪಾಟೀಲ್ ಪ್ರೌಢಶಾಲೆ, ಮಹಾರಾಷ್ಟ್ರ ರಾಜ್ಯದ ಪುಣೆಯ ಬಿಎಂಸಿಸಿ ಕಾಲೇಜಿನಲ್ಲಿ ಬಿಕಾಂ ಅಧ್ಯಯನ ಮಾಡಿದ್ದಾರೆ. ಪುಣೆಯ ಪಿಡಬ್ಲ್ಯುಸಿಯಲ್ಲಿ ಸಿಎ ಇಂಟರ್ನ್‌ಷಿಪ್ ಮುಗಿಸಿದ್ದಾರೆ. ಡಿಸೆಂಬರ್ 26ರಂದು ಸಿಎ ಫಲಿತಾಂಶ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.