
ಹೊರ್ತಿ: ‘ಶ್ರದ್ಧೆ, ಭಕ್ತಿ, ದಾನ, ಧರ್ಮ ಮತ್ತು ಪರೋಪಕಾರ ಗುಣವಿದ್ದವರಿಗೆ ಪುಣ್ಯ ಪ್ರಾಪ್ತಿಯಾಗಲಿದೆ’ ಬಾಗಲಕೋಟೆಯ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠದ ಶಿವಶರಣಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಶಿಗಣಾಪುರದಲ್ಲಿ ಈಚೆಗೆ ನಡೆದ ರುದ್ರ ಮಹಾ ಶಿವಯೋಗಿಗಳ 23ನೇ ವರ್ಷದ ಜಾತ್ರಾಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಹಾವಿನಾಳದ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಮಾತನಾಡಿ, ‘ಮಾನವ ಜನ್ಮ ಶೇಷ್ಠವಾದದ್ದು. ಜನ್ಮ ಸಾರ್ಥಕ ಆಗಬೇಕಾದರೆ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಬಾರದು. ದಾನ, ಧರ್ಮ, ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
‘ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮ, ಧರ್ಮಾಚರಣೆಯಲ್ಲಿ ಶ್ರೀಮಂತವಾಗಿದೆ’ ಎಂದು ಹೇಳಿದರು.
ಅನಿಲಗೌಡ ಬಿರಾದಾರ, ಶೇಖರಗೌಡ ಪಾಟೀಲ, ಶ್ರೀಪತಿಗೌಡ ಬಿರಾದಾರ, ಗುಂಡು ಗೌಡ ಪಾಟೀಲ, ರವಿಗೌಡ ಬಿರಾದಾರ, ವೀರಭದ್ರ ಸ್ವಾಮೀಜಿ ಮಾತನಾಡಿದರು. ಸಾಹೇಬಗೌಡ ಬಿರಾದಾರ, ನವೀನ ಬಿದರಿ, ರವಿಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಶಿವಾನಂದ ಪಾಟೀಲ, ಸಾಹೇಬಗೌಡ ಬಿರಾದಾರ, ರವಿಗೌಡ ಬಿರಾದಾರ, ಗುಂಡುಗೌಡ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ರುದ್ರ ಮಹಾಶಿವಯೋಗಿಗಳ ಭಾವಚಿತ್ರವನ್ನು ಅಲಂಕೃತ ರಥದಲ್ಲಿಟ್ಟು ಕುಂಭ ಹೊತ್ತ ಮಹಿಳೆಯರು, ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಲಕ್ಷ್ಮಿ ಮತ್ತು ಸಿದ್ಧಾರೂಢ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.