ADVERTISEMENT

ಚಿಮ್ಮಲಗಿ | ಜಾಮಿಯಾ ಮಸೀದಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:26 IST
Last Updated 17 ಫೆಬ್ರುವರಿ 2026, 2:26 IST
ಆಲಮಟ್ಟಿ ಸಮೀಪದ ಚಿಮ್ಮಲಗಿ ಭಾಗ 2 ಗ್ರಾಮದಲ್ಲಿ ಸೋಮವಾರ ಅಂಜುಮನ್ ಇಸ್ಲಾಂ ಕಮಿಟಿಯ ಮಸೀದಿ ಹಾಗೂ ಸೌಹಾರ್ದ ಸಮಾವೇಶವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು
ಆಲಮಟ್ಟಿ ಸಮೀಪದ ಚಿಮ್ಮಲಗಿ ಭಾಗ 2 ಗ್ರಾಮದಲ್ಲಿ ಸೋಮವಾರ ಅಂಜುಮನ್ ಇಸ್ಲಾಂ ಕಮಿಟಿಯ ಮಸೀದಿ ಹಾಗೂ ಸೌಹಾರ್ದ ಸಮಾವೇಶವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು   

ಆಲಮಟ್ಟಿ: ಜಗತ್ತಿನಲ್ಲಿ ಧರ್ಮ ಧರ್ಮಗಳ ಮಧ್ಯೆ ಸಾಕಷ್ಟು ವಾದ ವಿವಾದ, ಹಿಂಸೆ ನಡೆಯುತ್ತಿದ್ದರೂ, ನಮ್ಮ ಭಾಗದ ಜನತೆ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಧರ್ಮದ ಅಂಧಕಾರ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ಚಿಮ್ಮಲಗಿ ಭಾಗ - 2 ಗ್ರಾಮದಲ್ಲಿ ಸೋಮವಾರ ನಡೆದ ಅಂಜುಮನ್ ಇಸ್ಲಾಂ ಕಮಿಟಿಯ ಜಾಮೀಯಾ ಮಸೀದಿಯ ನವೀಕೃತ ಕಟ್ಟಡ ಹಾಗೂ ಸೌಹಾರ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಶಾಂತಿ, ನೆಮ್ಮದಿ ಇಲ್ಲದ ಸಮಾಜ ಎಂದಿಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲಾರದು ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಮುಫ್ತಿ ಅಬ್ದುಲ್ ಅಜೀಜ ಇನಾಮಿ ಮಾತನಾಡಿ, ಗ್ರಾಮದಲ್ಲಿ ಎಲ್ಲ ಧರ್ಮೀಯರೊಂದಿಗೆ ಕೂಡಿ ಒಗ್ಗಟ್ಟಿನಿಂದ ಬಾಳಬೇಕು, ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದರು.

ADVERTISEMENT

ಯುವ ಮುಖಂಡ ದಸ್ತಗೀರಸಾಬ್ ಮೇಲಿನಮನಿ ಅವರು, ಸಚಿವ ಶಿವಾನಂದ ಪಾಟೀಲರ ಶಾಸಕರ ಅನುದಾನದಡಿ ₹ 2 ಲಕ್ಷ  ಹಾಗೂ ಗ್ರಾಮಸ್ಥರು ಸೇರಿ ₹ 14 ಲಕ್ಷ ಸೇರಿಸಿ ₹ 16 ಲಕ್ಷದಲ್ಲಿ ಮಸೀದಿ ನವೀಕರಣಗೊಳಿಸಲಾಗಿದೆ ಎಂದರು.
ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಾಬು ವಾಲಿಕಾರ, ಮಲ್ಲನಗೌಡ್ರ ನರಸನಗೌಡ್ರ, ಬಿ.ಬಿ.ನರಸನಗೌಡ್ರ, ರಾಮು ಜಗತಾಪ, ನಜೀರಸಾಬ್ ಮುದ್ದೇಬಿಹಾಳ, ಅಬ್ದುಲ್ ಸಾಬ್ ಒಂಟಿ, ಮುದಕಪ್ಪ ಕುಂಬಾರ, ಶೇಖಣ್ಣ ಸಂಗಣ್ಣವರ, ಎಂ.ಆರ್‌. ಕಮತಗಿ, ಕೆ.ಎಂ. ಗುಡ್ನಾಳ, ಜಹಾಂಗೀರ್ ಮಕಾನದಾರ್, ಇಮಾಮಸಾಬ್ ಸಾಲಿಮನಿ, ಶಿವು ನಾಗಣಿ, ಲಕ್ಷ್ಮಣ ಚನಗೊಂಡ, ಎಚ್.ಎಫ್. ಕಟ್ಟಿಮನಿ ಇತರರು ಇದ್ದರು.

ಆಲಮಟ್ಟಿ ಸಮೀಪದ ಚಿಮ್ಮಲಗಿ ಭಾಗ 2 ಗ್ರಾಮದಲ್ಲಿ ಸೋಮವಾರ ಅಂಜುಮನ್ ಇಸ್ಲಾಂ ಕಮಿಟಿಯ ಮಸೀದಿ ಹಾಗೂ ಸೌಹಾರ್ದ ಸಮಾವೇಶವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.