ADVERTISEMENT

ಕೋವಿಡ್‌ ಪೀಡಿತರ ಶವ ಸಂಸ್ಕಾರ; ರುದ್ರಭೂಮಿ ಬಂದ್‌ ಮಾಡಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:06 IST
Last Updated 13 ಜುಲೈ 2020, 13:06 IST
   

ವಿಜಯಪುರ: ಕೋವಿಡ್‌ನಿಂದ ಸಾವಿಗೀಡಾದ ಇಬ್ಬರು ವ್ಯಕ್ತಿಗಳ ಶವವನ್ನು ಇಲ್ಲಿನ ಚಾಲುಕ್ಯ ನಗರದಲ್ಲಿನ ಶ್ರೀಸಿದ್ಧೇಶ್ವರ ರುದ್ರಭೂಮಿಯಲ್ಲಿ ಹೂಳಿರುವ ಕಾರಣಕ್ಕೆ ಸ್ಥಳೀಯರು ಸಶ್ಮಾನದ ಗೇಟಿಗೆ ಸೋಮವಾರ ಮುಳ್ಳು ಕಂಟಿ ಹಚ್ಚಿ, ಬಂದ್ ಮಾಡಿದ್ದಾರೆ.

‘ಕೋವಿಡ್ ಮುಗಿಯುವವರೆಗೂ ಯಾರೂ ಸ್ಮಶಾನದಲ್ಲಿ ಶವಗಳನ್ನು ಹೂಳದಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಚಾಲುಕ್ಯನಗರ ಮತ್ತು ಸಿದ್ಧಿ ವಿನಾಯಕ ಕಾಲೊನಿ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಕೋವಿಡ್‌ನಿಂದ ಸಾವಿಗೀಡಾದವರ ಶವಗಳನ್ನು ಹೂಳಿದ ಬಳಿಕ ಪಿಪಿಇ ಕಿಟ್‌ಗಳನ್ನು ಸಶ್ಮಾನದಲ್ಲಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಗೆ ಹಾಗೂ ಮಹಾನಗರ ಪಾಲಿಕೆಗೆ ದೂರು ನೀಡಿದ ಬಳಿಕ ಅವುಗಳನ್ನು ವಿಲೇವಾರಿ ಮಾಡಿದ್ದಾರೆ. ಸ್ಮಶಾನದ ಸಮೀಪದ ಮನೆಗಳಲ್ಲಿರುವ ವೃದ್ದರು, ಮಕ್ಕಳು, ಮಹಿಳೆಯರು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಬಳಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಶ್ಮಾನವನ್ನು ಬಂದ್‌ ಮಾಡದಿದ್ದರೆ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.