ADVERTISEMENT

ವಿಜಯಪುರದಲ್ಲಿ ಚಂಡಮಾರುತದ ಪರಿಣಾಮ: ದಟ್ಟೈಸಿದ ಮೋಡ, ಮಳೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:48 IST
Last Updated 27 ಸೆಪ್ಟೆಂಬರ್ 2021, 15:48 IST
ವಿಜಯಪುರ ನಗರದ ಹದಗೆಟ್ಟ ರಸ್ತೆಗಳಲ್ಲಿ ನಿಂತ ಮಳೆ ನೀರಲ್ಲಿ ಬೈಕ್‌ ಸವಾರರು ಸಂಚರಿಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಹದಗೆಟ್ಟ ರಸ್ತೆಗಳಲ್ಲಿ ನಿಂತ ಮಳೆ ನೀರಲ್ಲಿ ಬೈಕ್‌ ಸವಾರರು ಸಂಚರಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ಗುಲಾಬ್‌’ ಚಂಡ ಮಾರುತದ ಪರಿಣಾಮ ಸೋಮವಾರ ಜಿಲ್ಲೆಯಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿತ್ತು. ಆಗಾಗ ಗುಡುಗಿನೊಂದಿಗೆ ತುಂತುರು, ಧಾರಾಕಾರ ಮಳೆ ಸುರಿಯಿತು. ದಿನಪೂರ್ತಿ ಸೂರ್ಯನ ದರ್ಶನವಿಲ್ಲದೇ ಶೀತ ಗಾಳಿ ಬೀಸುತ್ತಿತ್ತು.

ಜಿಲ್ಲೆಯ ಹಲವೆಡೆ ಭಾನುವಾರ ತಡ ರಾತ್ರಿಯಿಂದ ಆರಂಭವಾದ ಮಳೆ ಸೋಮವಾರ ಬಿಟ್ಟು, ಬಿಟ್ಟು ಸಂಜೆ ವರೆಗೂ ಸುರಿಯಿತು. ವಿಜಯಪುರದ ನಗರದಲ್ಲಿ ಗುಂಡಿಬಿದ್ದ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ವಿಜಯಪುರ ನಗರ ಸೇರಿದಂತೆ ತಿಕೋಟಾ, ಹೊರ್ತಿ, ಇಂಡಿಯಲ್ಲೂ ಜಿಟಿಜಿಟಿ ಮಳೆಯಾಗಿದೆ.

ಬಸವನ ಬಾಗೇವಾಡಿ 6.7 ಮಿ.ಮೀ. ಮಳೆಯಾಗಿದೆ. ಮನಗೂಳಿ 6, ಮಟ್ಟಿಹಾಳ 2, ವಿಜಯಪುರ 2.2, ನಾಗಠಾಣ 9.2, ಭೂತನಾಳ 10.6, ಹಿಟ್ನಳ್ಳಿ 4.8, ತಿಕೋಟಾ 5.1, ಮಮದಾಪೂರ 8.4, ಕುಮಟಗಿ 4.6, ಇಂಡಿ 6, ನಾದ ಬಿ.ಕೆ. 6.6, ಅಗರಖೇಡ 3.2, ಹೋರ್ತಿ 26.6, ಹಲಸಂಗಿ 12, ಚಡಚಣ 6, ಝಳಕಿ 9, ತಾಳಿಕೋಟಿ 1.3, ಢವಳಗಿ 1, ಸಿಂದಗಿ 4, ಆಲಮೇಲ 3, ರಾಮನಹಳ್ಳಿ 5.8, ಕಡ್ಲೆವಾಡ 2.3, ದೇವರಹಿಪ್ಪರಗಿ1.6, ಕೊಂಡಗೂಳಿ 3 ಮಿ.ಮೀ. ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.