ADVERTISEMENT

ಇಂಡಿ | ಧರ್ಮಸ್ಥಳಕ್ಕೆ ಅಪಪ್ರಚಾರ ಖಂಡನೀಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:45 IST
Last Updated 31 ಆಗಸ್ಟ್ 2025, 5:45 IST
ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಖಂಡಿಸಿ ಇಂಡಿಯಲ್ಲಿ ಶುಕ್ರವಾರ ಜೈನ್ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು
ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಖಂಡಿಸಿ ಇಂಡಿಯಲ್ಲಿ ಶುಕ್ರವಾರ ಜೈನ್ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು   

ಇಂಡಿ: ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಖಂಡಿಸಿ ತಾಲ್ಲೂಕಿನ ಜೈನ ಸಮುದಾಯದವರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ರತ್ನತ್ರಯ ಮಂದಿರ ಚಿಕ್ಕ ಬಸ್ತಿಯಿಂದ ಮಹಾವೀರ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಆಡಳಿತ ಸೌಧ ತಲುಪಿತು.

ಜೈನ ಸಮಾಜ ಅಧ್ಯಕ್ಷ ಅಜೀತ ಧನಶೆಟ್ಟಿ ಮತ್ತು ಸನ್ಮಥ ಹಳ್ಳಿ ಮಾತನಾಡಿ, ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸಿರುವ ಹಿನ್ನೆಲೆ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರಲು ಕೆಲವರು ಷಡ್ಯಂತ್ರ ನಡೆಸಿದ್ದು, ಇದರ ಹಿಂದಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಧರ್ಮಸ್ಥಳದ ಪಾವಿತ್ರ್ಯಕ್ಕೆ ಕಳಂಕ ಹಚ್ಚಿ ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಲಾಗಿದೆ. ಬುರಡೆ ವ್ಯಕ್ತಿಯ ಬಗ್ಗೆ ಮೊದಲು ಪ್ರಾಥಮಿಕ ತನಿಖೆ ನಡೆಸಿದ್ದರೆ ಇಂತಹ ಅಪಪ್ರಚಾರ, ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ ಆಗುತ್ತಿರಲಿಲ್ಲ ಎಂದರು.

ಶಿರಸ್ತೆದಾರ ಆರ್.ಬಿ.ಮೂಗಿ ಅವರಿಗೆ ಮನವಿ ಅರ್ಪಿಸಿದರು. ಬಾಬು ಧನಶೆಟ್ಟಿ, ಅನಂತ ಕೋಟಿ, ಸಂಜಯ ಧನಪಾಲ, ಚಂದನ ಧನಪಾಲ, ಚೇತನ ಧನಶೆಟ್ಟಿ, ಶಾಂತಿಲಾಲ ಧನಶೆಟ್ಟಿ, ಶ್ರೇಣಿಕರಾಜ ಪಾಟೀಲ, ಹೀರಾಚಂದ ಹಳ್ಳಿ, ಶ್ರೀಕಾಂತ ಡಿ., ಮಹಾವೀರ ವರ್ಧಮಾನ, ಅಭಿನಂದನ ಕಿರಣಗಿ ಸತೀಶ ಪಾಂಡ್ರೆ, ಪ್ರಕಾಶ ಧನಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.