ADVERTISEMENT

ಡಾ. ರವೀಂದ್ರ ಚಿಂಚೋಳಕರ ಅವರ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:25 IST
Last Updated 2 ಡಿಸೆಂಬರ್ 2025, 6:25 IST
ಸೋಲಾಪುರದಲ್ಲಿ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ ಕುಮಾರ ಶಿಂಧೆ ಅವರು ಲೇಖಕ ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿದರು
ಸೋಲಾಪುರದಲ್ಲಿ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ ಕುಮಾರ ಶಿಂಧೆ ಅವರು ಲೇಖಕ ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿದರು   

ಸೊಲಾಪುರ: ನಗರದ ಹೀರಾಚಂದ ನೇಮಚಂದ ವಾಚನಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಡಾ. ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿಯನ್ನು ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರು ಬಿಡುಗಡೆಗೊಳಿಸಿದರು.

ಆನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಕ್ಷೇತ್ರದವರು ಅವಶ್ಯ ಓದಲು ಬೇಕಾದ ಪುಸ್ತಕ ಇದಾಗಿದೆ. ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೂ ಆಯ್ಕೆ ಮಾಡಬಹುದಾಗಿದೆ ಎಂದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ಪತ್ರಿಕೋದ್ಯಮದ ಅವಲೋಕನ ಮಾಡಿರುವುದರ ಜೊತೆಗೆ, ಪತ್ರಿಕೋದ್ಯಮ ಹೇಗಿರಬೇಕು, ರಾಜಕಾರಣದಲ್ಲಿ ಯಾವ ಬದಲಾವಣೆಗಳು ಆಗಬೇಕು ಎಂಬುದರ ಮೇಲೂ ಸೂಕ್ತವಾಗಿ ಬೆಳಕು ಚೆಲ್ಲಲಾಗಿದೆ ಎಂದು ಹೇಳಿದರು.

ADVERTISEMENT

ಪ್ರೊ. ಸುಧೀರ ಗೌಹಾಣೆ ಮಾತನಾಡಿ, ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಅಪರಾಧಿಕ ಹಿನ್ನೆಲೆಯವರು ಕಡಿಮೆ ಇದ್ದರು. ಈಗ ಆ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.

ಲೇಖಕ ಡಾ. ರವೀಂದ್ರ ಚಿಂಚೋಳಕರ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಇದೆ. ಯುವಕರು ರಾಜಕಾರಣವನ್ನು ದ್ವೇಷಿಸದೇ, ಉತ್ತಮ ರಾಜಕೀಯ ನಾಯಕರಾಗಿ ಮುಂದಕ್ಕೆ ಬರಬೇಕು ಎಂದು ಹೇಳಿದರು.

ಪತ್ರಕರ್ತ ಸುನಿಲ ಪಾಟೀಲ ಮಾತನಾಡಿ, ಇಂದಿನ ಕಾಲಕ್ಕೆ ಈ ಪುಸ್ತಕ ಅಗತ್ಯವಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಶ್ರೀಕಾಂತ ಯೆಳೇಗಾವಕರ ಮಾತನಾಡಿ, ಸೊಲಾಪುರ ಜಿಲ್ಲೆಯಲ್ಲಿ ಅಬ್ದುಲ್ ರಸೂಲ್ ಕುರ್ಬಾನ್ ಹುಸೇನ್ ಅವರ ಕಾಲದಿಂದ ಹೋರಾಟಗಾರ ಪತ್ರಕರ್ತರ ಪರಂಪರೆ ಇದೆ ಎಂದು ಹೇಳಿದರು.

ರಾಜಕೀಯ ವಿಶ್ಲೇಷಕ ರಾಜಾ ಮಾನೆ ಮಾತನಾಡಿ, ಮುದ್ರಿತ ಪತ್ರಿಕೋದ್ಯಮದಿಂದ ಡಿಜಿಟಲ್ ಪತ್ರಿಕೋದ್ಯಮದವರೆಗೆ ನಡೆದ ಮಹತ್ತರ ಬದಲಾವಣೆಗಳನ್ನೂ ಅವರು ಉಲ್ಲೇಖಿಸಿದರು.

ಪ್ರೊ. ಸಂತೋಷ ಪವಾರ, ಪ್ರಕಾಶಕ ಪಿಂಪಳಾಪುರೆ, ಡಾ.ಅಂಬಾದಾಸ ಭಾಸ್ಕೆ, ವಿಶ್ರಾಂತ ಕುಲಪತಿ ಪ್ರೊ. ಸುಧೀರ ಗೌಹಾಣೆ, ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಕ್ರಮ ಖೇಲಗುಡೆ ಹಾಗೂ ಛತ್ರಪತಿ ಸಂಭಾಜಿನಗರದ ವಿದ್ಯಾರ್ಥಿ ಪುಸ್ತಕ ಪ್ರಕಾಶನದ ಶಶಿಕಾಂತ ಪಿಂಪಳಾಪುರೆ ವಿದ್ಯಾರ್ಥಿಗಳು, ಪತ್ರಕರ್ತರು, ನಾಗರಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.