ADVERTISEMENT

‘ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆ’

ಇಂಡಿ: ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 2:39 IST
Last Updated 28 ಅಕ್ಟೋಬರ್ 2020, 2:39 IST
ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಕಾಲೇಜು, ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯ, ಎನ್.ಎಸ್.ಎಸ್. ಹಾಗೂ ಯುವ ರೆಡ್‌ಕ್ರಾಸ್‌ ಘಟಕ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹದಲ್ಲಿ ಡಾ. ವಿಶ್ವಾಸ ಕೋರವಾರ ಪ್ರತಿಜ್ಞಾ ವಿಧಿ ಬೋಧಿಸಿದರು
ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಕಾಲೇಜು, ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯ, ಎನ್.ಎಸ್.ಎಸ್. ಹಾಗೂ ಯುವ ರೆಡ್‌ಕ್ರಾಸ್‌ ಘಟಕ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹದಲ್ಲಿ ಡಾ. ವಿಶ್ವಾಸ ಕೋರವಾರ ಪ್ರತಿಜ್ಞಾ ವಿಧಿ ಬೋಧಿಸಿದರು   

ಇಂಡಿ: ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆಯಾಗಿದ್ದು, ಇಂತಹ ಪಿಡಗನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯ ಒಟ್ಟಾಗಿ ಶ್ರಮಿಸುವುದು ಅತ್ಯಂತ ಅವಶ್ಯಕವೆಂದು ಡಾ. ವಿಶ್ವಾಸ ಕೋರವಾರ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಇಂಡಿ ಪಟ್ಟಣದ ಶ್ರೀ ಸಾಂತೇರ್ಶವರ ವಿದ್ಯಾವರ್ಧಕ ಸಂಘ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ನಾಗರಿಕರು ಇದರ ಬಗ್ಗೆ ಜಾಗರೂಕರಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿಬೇಕೆಂಬ ಸದುದ್ದೇಶದಿಂದ ಜಾಗೃತಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರದ ವಿರುದ್ಧ ದೃಢ ಸಂಕಲ್ಪ
ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಆರ್‌ಜಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆನಂದ ನಡವಿನಮನಿ ಮಾತನಾಡಿ, ಅನ್ಯ ಮಾರ್ಗಗಳಿಂದ ಲಾಭ ಪಡೆದುಕೊಳ್ಳುವುದಿದ್ದರೆ ಅದು ಭ್ರಷ್ಟಾಚಾರ. ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಭ್ರಷ್ಟಾಚಾರವನ್ನು ನಿವಾರಿಸಬಹುದು. ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ದೊಡ್ಡದು. ಇಂದಿನ ಯುವಜನತೆಯಲ್ಲಿ ಪರಿಪೂರ್ಣ ವಿದ್ಯಾಭ್ಯಾಸದ ಕೊರತೆ, ಬಡತನ, ಕಾನೂನಿನ ಅರಿವು ಇಲ್ಲದೆ ಇರುವುದು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಎಲ್ಲರೂ ಸೇವಾ ಮನೋಭಾವದಿಂದ ಕೆಲಸ ಮಾಡುವುದರಿಂದ ಭ್ರಷ್ಟಾಚಾರ ಇಳಿಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಯುವ ರೆಡ್‌ಕ್ರಾಸ್‌ ಕಾರ್ಯಕ್ರಮ ಅಧಿಕಾರಿ ಎಸ್.ಬಿ.ಜಾಧವ ನಿರೂಪಿಸಿದರು. ರಾಘವೇಂದ್ರ ಇಂಗನಾಳ ಪ್ರಾರ್ಥಿಸಿದರು. ಡಾ.ಪಿ.ಕೆ.ರಾಠೋಡ ಸ್ವಾಗತಿಸಿದರು. ಶ್ರೀಶೈಲ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ ರಾಠೋಡ, ಎಂ.ಆರ್.ಕೋಣದೆ, ಡಾ.ಸುರೇಂದ್ರ, ಎಸ್.ಎಸ್.ಲಚ್ಯಾಣ, ಸೋಮು, ಪ್ರಶಾಂತ, ರಾಹುಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.