
ಆಲಮಟ್ಟಿ: ಸಮೀಪದ ವಂದಾಲ ಗ್ರಾಮದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಜ.7 ರಿಂದ ನಾಲ್ಕು ದಿನಗಳ ಕಾಲ ಜರುಗಲಿದೆ. ಈಗಾಗಲೇ ಕಿರುರಥೋತ್ಸವ (ಹುಚ್ಚಯ್ಯನ ತೇರು) ಶನಿವಾರದಿಂದ ನಿತ್ಯ ಐದು ದಿನಗಳ ಕಾಲ ಆರಂಭಗೊಂಡಿದೆ.
ಜ.7 ರಂದು ಬನಶಂಕರಿ ದೇವಿಗೆ ವಿಶೇಷ ಪೂಜೆ ಜರುಗಲಿದ್ದು, ನಸುಕಿನ ಜಾವ ಸಹಸ್ರಾರು ಭಕ್ತರು ದೀಡ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಲಿದ್ದಾರೆ. ನಂತರ ದೇವಿಗೆ ವಿಶೇಷ ಪೂಜೆ, ಮಹಾ ಅಭಿಷೇಕ ಜರುಗಲಿದೆ.
ಮಧ್ಯಾಹ್ನ 2.30 ರಿಂದ ಎರಡು ಗಂಟೆಗಳ ಕಾಲ ಕಳಸದ ಮೆರವಣಿಗೆ ಗ್ರಾಮದಲ್ಲಿ ಜರುಗಲಿದೆ.
ಸಂಜೆ 5 ಕ್ಕೆ ಬನಶಂಕರಿ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. 7 ಕ್ಕೆ ಹೂಮಾಲೆಯ ಮೆರವಣಿಗೆ ನಡೆಯಲಿದೆ.
ಜ.8 ರಂದು ಮಧ್ಯಾಹ್ನ 2 ಕ್ಕೆ ದ್ಯಾಮವ್ವನ ಸೋಗು ನಡೆಯಲಿದ್ದು, ಸಂಜೆ 7 ಕ್ಕೆ ಗೌರಿ ಉತ್ಸವ ಜರುಗಲಿದೆ. ರಾತ್ರಿ 10 ಕ್ಕೆ 'ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ' ನಾಟಕ ಪ್ರದರ್ಶನಗೊಳ್ಳಲಿದೆ.
ಜ.9 ರಂದು ಭಾರ ಎತ್ತುವ ಸ್ಪರ್ಧೆಗಳು, ಸಂಜೆ 4 ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾತ್ರಿ 10 ಕ್ಕೆ ' ಮಾರಿಕಣ್ಣು ಹೋರಿಮ್ಯಾಲೆ' ಎಂಬ ನಾಟಕ ಪ್ರದರ್ಶನ ಜರುಗಲಿದೆ.
ಜ.10 ರಂದು ಬಸವೇಶ್ವರ ಮೂರ್ತಿಯ ವಿಸರ್ಜನೆ ನಡೆಯಲಿದೆ. ಜಾತ್ರೆಯ ನಾಲ್ಕು ದಿನಗಳ ಕಾಲ ನಿರಂತರ ಅನ್ನ ದಾಸೋಹ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.