ADVERTISEMENT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆ ಕೇಳಲು ರೈತರ ಆಗ್ರಹ

ಸಚಿವ ಸಂಪುಟದಿಂದ ವಜಾಗೊಳಿಸಿ; ರೈತ ಸಂಘಟನೆಗಳ ಜಿಲ್ಲಾ ಒಕ್ಕೂಟದಿಂದ ಒತ್ತಾಯ  

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 11:20 IST
Last Updated 19 ಆಗಸ್ಟ್ 2021, 11:20 IST
ವಿಜಯಪುರ ಜಿಲ್ಲಾ ರೈತ ಸಂಘಟಣೆಗಳ ಒಕ್ಕೂಟದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು
ವಿಜಯಪುರ ಜಿಲ್ಲಾ ರೈತ ಸಂಘಟಣೆಗಳ ಒಕ್ಕೂಟದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು   

ವಿಜಯಪುರ:ದೆಹಲಿಯಲ್ಲಿ ನಡೆಸುತ್ತಿರುವುದುರೈತರಹೋರಾಟವಲ್ಲ, ದಲ್ಲಾಳಿಗಳು ಹಾಗೂ ಏಜೆಂಟರು ನಡೆಸುತ್ತಿರುವ ಹೋರಾಟ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಖಂಡಿಸಿ ರೈತ ಸಂಘಟನೆಗಳ ಜಿಲ್ಲಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಸಚಿವೆ ಶೋಭಾ ರೈತ ಕುಲಕ್ಕೆ ಹಾಗೂ ಹೋರಾಟಗಾರರಿಗೆ ಅವಮಾನಮಾಡಿದ್ದಾರೆ. ಕೂಡಲೇ ಅವರು ರೈತರ ಕ್ಷಮೆಯಾಚಿಸಬೇಕು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜಕೀಯವಾಗಿ ಅಪ್ರಾಪ್ತರಾಗಿರುವ ಸಚಿವೆ ಶೋಭಾ ಕರಂದ್ಲಾಜೆ, ರೈತರ ಹಾಗೂ ಹೋರಾಟಗಾರರ ವಿಷಯದಲ್ಲಿ ಹಗುರವಾಗಿ ಮಾತನಾಡಬಾರದು. ಶೋಭಾ ತಮ್ಮ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಬೇಕು. ಮನಸ್ಸಿಗೆ ಬಂದಂತೆ ರೈತರನ್ನು ಹೀಯಾಳಿಸಿದರೆ ಮುಂದೊಂದು ದಿನ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದುಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಹೇಳಿದರು.

ADVERTISEMENT

ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಇಡೀ ದೇಶದ ರೈತರ ಕ್ಷಮೆಯಾಚಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಇಂತಹ ರೈತ ವಿರೋಧಿ, ಅಪ್ರಾಪ್ತ ರಾಜಕಾರಣಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಆರ್‌ಕೆಎಸ್‍ನ ರಾಜ್ಯ ಉಪಾಧ್ಯಕ್ಷ ಬಿ. ಭಗವಾನ ರೆಡ್ಡಿ ಮಾತನಾಡಿ,ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿಸಿ ಜನರನ್ನು ನಾಶ ಮಾಡಲು ಹೊರಟಿದೆ. ಇತ್ತೀಚೆಗೆ ಮತ್ತೆ ಗ್ಯಾದಗಗ ಸಿಲೆಂಡರ್ ಬೆಲೆ ₹ 25 ಹೆಚ್ಚಿಸಿ ಜನರಿಗೆ ಮತ್ತು ಹೊರೆಸಿದ್ದಾರೆ. ಆದ್ದರಿಂದ ತಕ್ಷಣ ಅಡುಗೆ ಅನಿಲ ದರವನ್ನು ತಕ್ಷಣ ಕಡಿಮೆ ಮಾಡಬೇಕು. ಅದರಂತೆ ಪೆಟ್ರೋಲ್ ಡಿಸೇಲ್, ದರವನ್ನು ಮೊದಲಿನಂತೆ ಪ್ರತಿ ಲೀಟರ್‌ಗೆ ₹50 ರಿಂದ ₹60 ವರೆಗೆ ಸ್ಥಿರಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳು ಜೇವೂರ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಸಿದ್ರಾಮ ಅಂಗಡಗೇರಿ, ನಾಗಣ್ಣ ಚಿಗರಿ, ಸುರೇಖಾ ರಜಪೂತ, ರಾಜು ರಣದೇವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದ ರೈತ ವಿರೋಧಿ ನೀತಿ ಅನುಸರಿಸುತ್ತಾ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸಮಾಡುತ್ತಿವೆ

–ಬಿ. ಭಗವಾನ ರೆಡ್ಡಿ,ರಾಜ್ಯ ಉಪಾಧ್ಯಕ್ಷ,ಆರ್‌ಕೆಎಸ್‍

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.