
ಇಂಡಿ: ಎಳ್ಳು ಅಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಪಟ್ಟಣ ಸೇರಿದಂತೆ ಗ್ರಾಮದ ಹೊಲಗಳಲ್ಲಿ ಶುಕ್ರವಾರ ರೈತರು ಭಕ್ತಿ ಮತ್ತು ಸಡಗರದಿಂದ ಆಚರಿಸಿದರು.
ಭೂಮಿತಾಯಿಗೆ ಚರಗ ಚೆಲ್ಲುವ ಮೂಲಕ ನೈವೇದ್ಯ ಅರ್ಪಿಸಿದರು. ಬೆಳಿಗ್ಗೆ ಮನೆಯಲ್ಲಿ ಸಜ್ಜೆ ರೊಟ್ಟಿ, ಪುಂಡಿ ಪಲ್ಲೆ ಸೇರಿದಂತೆ ಇತರೆ ಅಹಾರ ಪದಾರ್ಥ ತಯಾರಿಸಿ ನಂತರ 11 ಗಂಟೆಗೆ ಎತ್ತಿನ ಗಾಡಿ, ಕಾರು, ಜೀಪು, ದ್ವಿಚಕ್ರವಾಹನ ಸೇರಿದಂತೆ ಇತರೆ ವಾಹನಗಳಲ್ಲಿ ತಮ್ಮ ಹೊಲಗಳಿಗೆ ಕುಟುಂಬದವರು ಬಂಧುಬಳಗದವರ ಜೊತೆ ತೆರಳಿದರು.
ಹೊಲದಲ್ಲಿರುವ ಗುಡಿ ಗ್ರಾಮದಲ್ಲಿರುವ ಗುಡಿ ದೇವಸ್ಥಾನ ಬೆಳೆ ಯಂತ್ರೋಪಕರಣಗಳು ತೆರೆದ ಬಾವಿ, ಕೊಳವೆ ಬಾವಿ ಆಕಳು, ದನಕರುಗಳಿಗೆ ಪೂಜೆ ಸಲ್ಲಿಸಿದರು. ಚರಗ ಚೆಲ್ಲಿದರು.
ಸಜ್ಜೆ ರೊಟ್ಟಿ ಚವಳಿಕಾಯಿ ಚೆಂಗಭಲೋ ಎಂದು ಕೂಗುತ್ತ ಎಳ್ಳು ಅಮಾವಾಸ್ಯೆ ಆಚರಿಸಿದರು.
ಸಜ್ಜೆ ರೊಟ್ಟಿ, ಕಡಬು , ಚಪಾತಿ, ಜೋಳದ ರೊಟ್ಟಿ, ಶೇಂಗಾ ಹಿಂಡಿ, ಪುಂಡಿ ಪಲ್ಲೆ ಇತರೆ ಪಲ್ಲೆ ಶೇಂಗಾ ಮತ್ತು ಇತರೆ ಹೋಳಿಗೆ ಅನ್ನ ಸಾಂಬಾರದಂತಹ ಪದಾರ್ಥಗಳನ್ನು ಕುಟುಂಬದವರು ಸಹ ಭೋಜನ ಮಾಡಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.