ವಿಜಯಪುರ:ನಗರದ ಅಫಝಲಪುರ ಟಕ್ಕೆಯಲ್ಲಿಇತ್ತೀಚೆಗೆ ಸಿಡಿಲು ಬಡಿದು ಸಾವಿಗೀಡಾದ ಭಾಷಾಸಾಬ್ ಕರ್ಜಗಿ, ಅಶೋಕರಾಮಕಾರಜೋಳ ಹಾಗೂ ಜಾವಿದ್ ಹಾಜಿಸಾಬ್ ಜಾಲಗೇರಿ ಅವರಕುಟುಂಬದವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಶನಿವಾರ ಆರ್ಥಿಕ ನೆರವು ನೀಡಿದರು.
ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸರ್ಕಾರದಿಂದ ಸಿಗುವ ಪರಿಹಾರಕೊಡಿಸಲಾಗುವುದು. ಸರ್ಕಾರ ಕೂಡಲೇ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದರು.
ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಭಕ್ಷಿ, ಜಲನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಾಹಪುರ, ಅನಿಲ್ ಅವಳೆ, ಅಲ್ತಾಫ್ ಅಸ್ಕಿ, ಯುನೂಸ್, ರಹೀಮ್ ಮುಶ್ರೀಫ್, ನಗರಸಭೆ ಮಾಜಿ ಸದಸ್ಯ ಕರ್ಜಗಿ, ರವಿ ಕುಂಬಾರ, ಹಾಜಿ ಪಿಂಜಾರ್ ಮತ್ತು ಕಾರಜೋಳ ಕುಟುಂಬದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.