ADVERTISEMENT

ವಿಜಯಪುರ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ: ಆಶೀಶ ಕುಮಾರ ಬಲ್ಲಾಳ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:42 IST
Last Updated 2 ಫೆಬ್ರುವರಿ 2026, 2:42 IST
ತಿಕೋಟಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡದ ಮಾಜಿ ನಾಯಕ  ಆಶೀಶ ಕುಮಾರ ಬಲ್ಲಾಳ ಕ್ರೀಡಾಜ್ಯೋತಿ ಸ್ವೀಕರಿಸಿದರು 
ತಿಕೋಟಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡದ ಮಾಜಿ ನಾಯಕ  ಆಶೀಶ ಕುಮಾರ ಬಲ್ಲಾಳ ಕ್ರೀಡಾಜ್ಯೋತಿ ಸ್ವೀಕರಿಸಿದರು    

ವಿಜಯಪುರ: ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಮುನ್ನಡೆದಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಆಶೀಶ ಕುಮಾರ ಬಲ್ಲಾಳ ಹೇಳಿದರು.

ತಿಕೋಟಾದಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಎ. ಬಿ. ಜತ್ತಿ ಪಿಯು ಕಾಲೇಜು (ಪ್ರೌಢಶಾಲೆ ವಿಭಾಗ) ನಲ್ಲಿ ಅಂತರರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು,  ವೈದ್ಯ ದಿ. ಡಾ.ಸಿ.ಆರ್.ಬಿದರಿ ಅವರ ಸ್ಮರಣಾರ್ಥ ಆಯೋಜಿಸಲಾಗಿರುವ ಎರಡು ದಿನಗಳ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ಅಥ್ಲೇಟಿಕ್ ಕೂಟ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಸಿ.ಆರ್.ಬಿದರಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಹಾಕಿ ಆಟಗಾರರಾಗಿರುವುದನ್ನು ತಿಳಿದು ತುಂಬಾ ಸಂತೋಷವಾಗಿದೆ. ಬಿದರಿ ಅವರ ಕುಟುಂಬದ ಸದಸ್ಯರು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಆಯೋಜಿಸಿರುವ ಈ ಕ್ರೀಡಾಕೂಟ ಪ್ರಶಂಸನೀಯ ಎಂದರು.

ADVERTISEMENT

ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ನಾನು 17ನೇ ವಯಸ್ಸಿನಲ್ಲಿ ಹಾಕಿಗೆ ಪಾದಾರ್ಪಣೆ ಮಾಡಿದೆ. ಕ್ರೀಡಾ ಸಲಕರಣೆಗಳ ಮಧ್ಯೆಯೂ ಶ್ರಮಪಟ್ಟು ಸಾಧನೆ ಮಾಡಿದ್ದೇನೆ. ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದು ಹೆಮ್ಮೆ ತಂದಿದೆ. ಹೀಗಾಗಿ ಪ್ರತಿಯೊಂದು ಸಾಧನೆಯ ಹಿಂದೆ ಸತತ ಪ್ರಯತ್ನ, ಸಾಧಿಸುವ ಛಲ ಇರಬೇಕು. ಪ್ರತಿಯೊಬ್ಬ ಕ್ರೀಡಾ ಸಾಧಕರ ಹಿಂದೆ ಅವರದೇ ಆದ ಸಾಧನೆಯ ಕುತೂಹಲಕಾರಿ ಕಥೆಗಳಿಗವೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಪ್ಯಾರಾಓಲಂಪಿಯನ್ ರಕ್ಷಿತಾ ರಾಜು, ಬಂಜಾರಾ ಕಸೂತಿ ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ. ಪಾಟೀಲ, ವಿಜೇಂದ್ರ ಬಿದರಿ, ಕಲ್ಪನಾ ಎಂ. ಪಾಟೀಲ, ಧೃವ ಎಂ. ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ವೈ. ಎಂ. ಜಯರಾಜ, ರಿಜಿಸ್ಟಾರ್‌ ಡಾ.ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಎಸ್. ಬಗಲಿ, ಐ. ಎಸ್. ಕಾಳಪ್ಪನವರ, ದೈಹಿಕ ನಿರ್ದೇಶಕ ಎಸ್.ಎಸ್. ಕೋರಿ, ಸಹಾಯಕ ನಿರ್ದೇಶಕ ಕೈಲಾಶ ಹಿರೇಮಠ, ಎ.ಬಿ. ಜತ್ತಿ ಪಿಯು ಕಾಲೇಜು(ಪ್ರೌಢಶಾಲೆ ವಿಭಾಗ) ಉಪಪ್ರಾಚಾರ್ಯ ಜಗದೀಶ ಎಂ. ಪಾಟೀಲ, ಶಿವರಾಜ ಕಲ್ಯಾಣಿ, ಬಿ.ಎಲ್.ಡಿ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪೂರ, ಪ್ರಾಚಾರ್ಯ ಸಿ. ಬಿ. ಪಾಟೀಲ, ಉಷಾ ಹೀರೆಮಠ, ಸುಭಾಷ ಕನ್ನೂರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.