ADVERTISEMENT

ಕೊಲ್ದಾರ: ಸಸಿ ನೆಟ್ಟು ಜನ್ಮದಿನ ಆಚರಿಸಿಕೊಂಡ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:10 IST
Last Updated 7 ಜೂನ್ 2025, 13:10 IST
ಕೊಲ್ದಾರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರ ಜನ್ಮದಿನದ ಪ್ರಯುಕ್ತ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆ ಹಾಗೂ ಎಸ್.ಕೆ.ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಬೆಳ್ಳುಬ್ಬಿ ಉದ್ಘಾಟಿಸಿದರು
ಕೊಲ್ದಾರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರ ಜನ್ಮದಿನದ ಪ್ರಯುಕ್ತ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆ ಹಾಗೂ ಎಸ್.ಕೆ.ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಬೆಳ್ಳುಬ್ಬಿ ಉದ್ಘಾಟಿಸಿದರು   

ಕೊಲ್ದಾರ: ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರ ಜನ್ಮದಿನದ ಪ್ರಯುಕ್ತ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆ ಹಾಗೂ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಹಾಗೂ 2025ನೇ ಐಪಿಎಲ್ ಪ್ರಶಸ್ತಿ ಪಡೆದ ಆರ್‌ಸಿಬಿ ತಂಡಕ್ಕೆ ಶುಭಕೋರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಳೂತಿ ಗ್ರಾಮದ ಮುಖಂಡರಾದ ನಂದಬಸಪ್ಪ ಚೌಧರಿ ಮಾತನಾಡಿ, ಬೆಳ್ಳುಬ್ಬಿಯವರ ಸಾಧನೆ ಹೊಗಳಲು ಪದಗಳು ಸಾಲದು. ಅವರು ಹೋರಾಟದ ಮೂಲಕ ನಾಯಕರಾಗಿ ರೂಪಗೊಂಡವರು. ಇಂತಹ ಧೀಮಂತ ನಾಯಕ ಬ.ಬಾಗೇವಾಡಿ ಮತಕ್ಷೇತ್ರಕ್ಕೆ ದೊರಕಿರುವುದು ನಮ್ಮ ಪುಣ್ಯವೇ ಸರಿ ಎಂದರು.

ಬಿಜೆಪಿ ಮುಖಂಡ ಸಿ.ಎಂ.ಗಣಕುಮಾರ ಮಾತನಾಡಿ, ವಿಶ್ವ ಪರಿಸರ ದಿನದಂದೇ ಬೆಳ್ಳುಬ್ಬಿ ಅವರು ಜನಿಸುವ ಮೂಲಕ ಅಧಿಕಾರ ಇರಲಿ, ಇಲ್ಲದಿರಲಿ ಸದಾಕಾಲ ಜನರೊಂದಿಗಿದ್ದು ಜನರ ಬಗ್ಗೆ ಯೋಚಿಸುವ ಮೂಲಕ ಬಸವನಬಾಗೇವಾಡಿ ಕ್ಷೇತ್ರಕ್ಕೆಲ್ಲಾ ನೆರಳಾಗಿದ್ದಾರೆ ಎಂದರು.

ADVERTISEMENT

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ಸಿ.ಎಂ ಗಣಕುಮಾರ, ನಂದಬಸಪ್ಪ ಚೌಧರಿ, ಚಿನ್ನಪ್ಪ ಗಿಡ್ಡಪ್ಪಗೋಳ, ಸಗರಪ್ಪ ಮುರನಾಳ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಲ್ಲಪ್ಪ ಸೊನ್ನದ, ವಿರುಪಾಕ್ಷಿ ಕೋಲಕಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಪ್ಪಾಸಿ ಮಟ್ಟಿಹಾಳ, ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಈರಯ್ಯ ಮಠಪತಿ, ಮಾಜಿ ತಾಪಂ ಅಧ್ಯಕ್ಷ ಕಲ್ಲು ಸೊನ್ನದ, ರಾಜಶೇಖರ ಶೀಲವಂತ, ಬಿ.ಕೆ ಗಿರಗಾವಿ, ಪಿ.ಕೆ ಗಿರಗಾವಿ, ಜಾವೀದ ಬಿಜಾಪುರ, ಜಗದೀಶ್ ಸುನಗದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.