ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದಿಂದ ನೀಡುವ ಪರಿಸರ ರಕ್ಷಕ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಿದೆ.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ತಾಲ್ಲೂಕಿನ ಬಸರಕೋಡದ ರೇಷ್ಮಾ ಇಕ್ಬಾಲ್ ಮಾಳನೂರ, ಪ್ರಾದೇಶಿಕ ಅರಣ್ಯ ಇಲಾಖೆಯ ವಿಭಾಗದಿಂದ ಅಡವಿ ಹುಲಗಬಾಳ ವ್ಯಾಪ್ತಿಯ ಶಿವಪ್ಪ ಸೋಮಲೆಪ್ಪ ರಾಠೋಡ, ಕೆಬಿಜೆಎನ್‌ಎಲ್ ವಿಭಾಗದಿಂದ ಸುರೇಶ ಬಿ ತಾಳಿಕೋಟಿ ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ದೇವರ ಹುಲಗಬಾಳ ವ್ಯಾಪ್ತಿಯಲ್ಲಿ ನೆಡುತೋಪು ವಾಚರ್ ಆಗಿ ಕೆಲಸ ಮಾಡುತ್ತಿರುವ ಮೌಲಾಸಾಬ ಜಂಗ್ಲೀಸಾಬ್ ನದಾಫ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗಳನ್ನು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ವೀರೇಶ ಇಟಗಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ ಪ್ರಕಟಿಸಿದ್ದು, ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.