ADVERTISEMENT

ಗೋವಾ ಕನ್ನಡಿಗರಿಗೆ ಉಚಿತ ಆಹಾರ ಧಾನ್ಯ ಪೂರೈಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 8:54 IST
Last Updated 5 ಏಪ್ರಿಲ್ 2020, 8:54 IST
   

ವಿಜಯಪುರ: ಎಂ.ಬಿ. ಪಾಟೀಲ ಫೌಂಡೇಷನ್ ವತಿಯಿಂದ ಇಂದು ಎರಡು ವಾಹನಗಳಲ್ಲಿ ಗೋವಾ ಕನ್ನಡಿಗರಿಗಾಗಿ ಆಹಾರ ಧಾನ್ಯಗಳನ್ನು ಕಳುಹಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಲಾಕ್‌ಡೌನ್ ನಿಂದಾಗಿ ಗೋವಾದಲ್ಲಿ ಇರುವ ಜಿಲ್ಲೆಯ ಕನ್ನಡಿಗರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರಣ ಅವರಿಗೆ ಎಂ.ಬಿ.ಪಾಟೀಲ ಫೌಂಡೇಶನ್ ವತಿಯಿಂದ 5ಕೆ.ಜಿ. ಗೋಧಿ ಹಿಟ್ಟು, 3 ಕೆ.ಜಿ. ಅಕ್ಕಿ, 1 ಕೆ.ಜಿ.ಬೇಳೆ ಹಾಗೂ ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳನ್ನು ಒಳಗೊಂಡ 2 ಸಾವಿರ ಪ್ಯಾಕೆಟ್ ಗಳನ್ನು ಲಾರಿಗಳ ಮೂಲಕ ಕಳುಹಿಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಕಳುಹಿಸಲಾಗುವುದು ಎಂದರು.

ಫೌಂಡೇಷನ್ ನಿರ್ದೇಶಕರಾದ ಮಹಾಂತೇಶ ಬಿರಾದಾರ, ಗಂಗಾಧರ ಸಂಬಣ್ಣಿ, ಸಂಗು ಸಜ್ಜನ, ಸದಾನಂದ ಗುಡ್ಡೋಡಗಿ, ಡಿ.ಎಸ್.ಗುಡ್ಡೋಡಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.