ಸಿಂದಗಿ: ಚಿನ್ನದ ಮಳಿಗೆಯಲ್ಲಿದ್ದ ಸಿ.ಸಿ.ಕ್ಯಾಮೆರಾ ಫೂಟೇಜ್ ಅನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ನಂತರ, ಹೆಚ್ಚುವರಿ ಚಿನ್ನ ಪಡೆದವರು ಅಂಗಡಿಗೆ ಮರಳಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಹಂಚಿನಾಳ ಜ್ಯುವೆಲರ್ಸ್ ಅಂಗಡಿಯಲ್ಲಿ ಸೋಮವಾರ ಚಿನ್ನ ಖರೀದಿಯ ಭರಾಟೆ ನಡೆದಿದ್ದಾಗ, ಗ್ರಾಹಕರು ಒಬ್ಬರಿಗೆ 40 ಗ್ರಾಂ ಬದಲಿಗೆ 80 ಗ್ರಾಂ ಬಳೆಗಳನ್ನು ಪ್ಯಾಕ್ ಮಾಡಿ ನೀಡಲಾಗಿದೆ. ನಂತರ ಅಂಗಡಿ ಮಾಲೀಕರಿಗೆ ಲೆಕ್ಕ ಸಿಗದಿದ್ದಾಗ ಸಿ.ಸಿ. ಕ್ಯಾಮೆರಾ ಫೂಟೇಜ್ ಅನ್ನು ಪರಿಶೀಲಿಸಿದ್ದಾರೆ. ಆಗ ಹೆಚ್ಚುವರಿ ಬಳೆಗಳನ್ನು ನೀಡಿದ್ದು ಪತ್ತೆಯಾಗಿದೆ. ಅಂಗಡಿಯ ಸೋಮನಾಥ ಸಿ.ಸಿ. ಕ್ಯಾಮೆರಾ ಫೂಟೇಜ್ ಕ್ಲಿಪ್ಪಿಂಗ್ ಅನ್ನು ಕರವೇ ಪ್ರಮುಖ ಸಂತೋಷ ಪಾಟೀಲ ಡಂಬಳಗೆ ಕಳುಹಿಸಿದ್ದಾರೆ.
ಸಂತೋಷ ತಮಗೆ ಗುರುತಿರುವ ಎಲ್ಲ ಗುಂಪುಗಳಲ್ಲಿ ಈ ಚಿತ್ರಗಳನ್ನು ಹರಿಬಿಟ್ಟಿದ್ದಾರೆ. ಕೊಕಟನೂರ ಗ್ರಾಮದ ಸಿದ್ದಣ್ಣ ಹಂದ್ರಾಳ ತಮಗೆ ಬಂದಿದ್ದ ಹೆಚ್ಚುವರಿ ಬಳೆಗಳನ್ನು ಅಂಗಡಿಯ ಮಾಲೀಕ ಸೋಮನಾಥ ಅವರಿಗೆ ತಂದು ಮರಳಿಸಿದ್ದಾರೆ. ಅವರೂ ಮನೆಗೆ ಹೋಗಿ ನೋಡಿದಾಗಲೇ ಈ ಅವಾಂತರ ಪತ್ತೆಯಾಗಿದೆ. ಕೂಡಲೇ ಅಂಗಡಿಗೆ ತಂದು ಮರಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.