ADVERTISEMENT

ಸಿಂದಗಿ: ಕಂದಾಯ ಗ್ರಾಮವಾಗಿ ಗೂಗಿಹಾಳ; ಶಾಸಕರಿಗೆ ಸಿಹಿ ತಿನ್ನಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:44 IST
Last Updated 7 ಮೇ 2025, 13:44 IST
ಸಿಂದಗಿ ವಿಧಾನಸಭಾ ಕ್ಷೇತ್ರದ ಗೂಗಿಹಾಳವನ್ನು ಕಂದಾಯ ಗ್ರಾಮವಾಗಿ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಮಾಬೂಬಿ ಚೌಧರಿ ಸಿಹಿ ತಿನ್ನಿಸಿದರು
ಸಿಂದಗಿ ವಿಧಾನಸಭಾ ಕ್ಷೇತ್ರದ ಗೂಗಿಹಾಳವನ್ನು ಕಂದಾಯ ಗ್ರಾಮವಾಗಿ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಮಾಬೂಬಿ ಚೌಧರಿ ಸಿಹಿ ತಿನ್ನಿಸಿದರು   

ಸಿಂದಗಿ: ‘ಮತಕ್ಷೇತ್ರದ ಗೂಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸುವುದಾಗಿ ವಿಧಾನಸಭೆ ಚುನಾವಣೆ ವೇಳೆ ಮಾತು ಕೊಟ್ಟಿದ್ದೆ. ನುಡಿದಂತೆ ನಡೆದಿರುವೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಗೂಗಿಹಾಳ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಗ್ರಾಮಸ್ಥರ ಹಲವಾರು ವರ್ಷಗಳ ಬೇಡಿಕೆಯನ್ನು ಈಡೇರಿಸಿರುವೆ’ ಎಂದು ತಿಳಿಸಿದರು.

ಗ್ರಾಮದ ಹಿರಿಯ ಮಹಿಳೆ ಮಾಬೂಬಿ ಚೌಧರಿ ಶಾಸಕರಿಗೆ ಸಿಹಿ ತಿನ್ನಿಸಿದರು. ಕಾಂತನಗೌಡ ಪಾಟೀಲ, ಹಮೀದ ಚೌಧರಿ, ಲಕ್ಷ್ಮಣ ಗೂಗಿಹಾಳ, ಚಾಂದ ಕಸಾಬ, ಮಶ್ಯಾಕ ಕಸಬ, ಸೈಫನ್ ಕಸಬ, ಸೈಫನ್ ಚೌಧರಿ, ಗುಲಾಮ ಕೋರಬು, ಮಾಬೂಬಿ ಚೌಧರಿ, ವಜೀರ ಗೂಗಿಹಾಳ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.