ADVERTISEMENT

ಗ್ರಾಪಂ ಉಪ ಚುನಾವಣೆ: ಶೇ 64.78ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 14:31 IST
Last Updated 20 ಮೇ 2022, 14:31 IST

ವಿಜಯಪುರ: ವಿವಿಧ ಕಾರಣಗಳಿಂದ ತೆರವಾಗಿದ್ದಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು.

ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಗ್ರಾಮ ಪಂಚಾಯಿತಿಯ ಕತಕನಹಳ್ಳಿ, ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮ ಪಂಚಾಯಿತಿಯ ತಾರಾಪುರ, ಸಿಂದಗಿ ತಾಲ್ಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯಿತಿಯ ಬೋರಗಿ, ದೇವರ ಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮ ಪಂಚಾಯಿತಿಯ ಚಟ್ನಳ್ಳಿ ಮತ್ತು ಆನೆಮಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು.

ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಟ್ಟು 2250 ಪುರುಷರ ಪೈಕಿ 1454ರಷ್ಟು, ಒಟ್ಟು 2105 ಮಹಿಳೆಯರ ಪೈಕಿ 1367ರಷ್ಟು ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಿದ್ದಾರೆ.

ADVERTISEMENT

ಬೆಳಿಗ್ಗೆ 7 ಕ್ಕೆ ಮತದಾನ ಆರಂಭಗೊಂಡಿತು. ಬೆಳಿಗ್ಗೆ 7ರಿಂದ 9 ರ ವರೆಗೆ ಶೇ 12.66ರಷ್ಟು, 11ರ ವರೆಗೆ ಶೇ 32.81ರಷ್ಟು, ಮಧ್ಯಾಹ್ನ 1ರ ವರೆಗೆ ಶೇ 46.51ರಷ್ಟು, ಮಧ್ಯಾಹ್ನ 3ರ ವರೆಗೆ ಶೇ 57.09ರಷ್ಟು ಮತ್ತು ಮತದಾನದ ಮುಕ್ತಾಯಗೊಂಡಾಗ ಶೇ 64.78ರಷ್ಟು ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.