ADVERTISEMENT

ತಾಜ್‌ಮಹಲ್‌ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

​ಪ್ರಜಾವಾಣಿ ವಾರ್ತೆ
Published 19 ಮೇ 2023, 15:48 IST
Last Updated 19 ಮೇ 2023, 15:48 IST
ಆಗ್ರಾದ ತಾಜ್‌ಮಹಲ್‌ ಎದುರು ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮರೆಪ್ಪ ಮತ್ತು ಶಾಂತಾ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು
ಆಗ್ರಾದ ತಾಜ್‌ಮಹಲ್‌ ಎದುರು ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮರೆಪ್ಪ ಮತ್ತು ಶಾಂತಾ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು   

ವಿಜಯಪುರ: ಆಗ್ರಾದ ತಾಜ್‌ಮಹಲ್‌ ಬಳಿ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮರೆಪ್ಪ ತಳವಾರ ಹಾಗೂ ಶಾಂತಾ ತಳವಾರ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು.

ವಿವಾಹ ವಾರ್ಷಿಕೋತ್ಸವವನ್ನು ತಾಜ್‌ಮಹಲ್‌ ಬಳಿ ಆಚರಿಸಿಕೊಳ್ಳಲು 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಶಾಂತಾ ಬಯಸಿದ್ದರು. ಅವರ ಬಯಕೆ ಈಡೇರಿಸಲು ಮಕ್ಕಳಾದ ಪರಶುರಾಮ, ಬಸವರಾಜ ಅವರನ್ನು ಆಗ್ರಾಕ್ಕೆ ಕರೆದೊಯ್ದರು. ನಂತರ ಅಲ್ಲಿನ ಪಂಚತಾರಾ ವಿಲಾಸಿ ಹೋಟೆಲ್‌ನಲ್ಲಿ ಕೇಕ್‌ ಕತ್ತರಿಸಿ, ಸಂಭ್ರಮಿಸಿದರು.

ದಂಪತಿಗೆ 6 ಜನ ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. 21 ಜನ ಮೊಮ್ಮಕ್ಕಳು, ಇಬ್ಬರು ಸೊಸೆಯರು, ಇಬ್ಬರು ಮರಿ ಮೊಮ್ಮಕ್ಕಳು ಇದ್ದಾರೆ.

ADVERTISEMENT
ಆಗ್ರಾದ ಪಂಚತಾರಾ ಹೋಟೆಲ್‌ನಲ್ಲಿ ಮರೆಪ್ಪ ಮತ್ತು ಶಾಂತಾ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.