
ಹಳಿಯಾಳ: ಕ್ಷೇತ್ರದ ಅಭಿವೃದ್ದಿಗಾಗಿ ಮುಖ್ಯಮುಂತ್ರಿ ವಿಶೇಷ ಅನದಾನದಡಿ ₹ 50 ಕೋಟಿ ಮಂಜೂರಿಯಾಗಿ ಶೀಘ್ರದಲ್ಲಿಯೇ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು.
ಭಾನುವಾರ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿಗಾಗಿ ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ₹37ಕೋಟಿ 50 ಲಕ್ಷ ಮಂಜೂರು ಆಗಿರುತ್ತದೆ ಎಂದರು.
ದೇವಸ್ಥಾನಗಳ ಜೀರ್ಣೋದ್ದಾರ, ವಕ್ಪ ಸಂಸ್ಥೆಗಳ ಸಂರಕ್ಷಣೆ, ನೂತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕೊಠಡಿ ನಿರ್ಮಾಣ, ಉನ್ನತ ಶಿಕ್ಷಣ ಇಲಾಖೆಯಿಂದ ಸರಕಾರಿ ಪಾಲಿಟೆಕ್ನಿಕ್, ಜೋಯಿಡಾ ಆವರಣದಲ್ಲಿ ಅಡಿಟೋರಿಯಮ್ ಕಟ್ಟಡದ ಉಳಿದ ಕಾಮಗಾರಿ ಪೂರ್ಣ ಗೊಳಿಸಲು ಹಾಗೂ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ದುರಸ್ತಿಗೆ ₹ 12 ಕೋಟಿ 50 ಲಕ್ಷ ವೆಚ್ಚದಲ್ಲಿ ಮಾಡಲಾಗುವುದು, ಕ್ಷೇತ್ರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ದಿ, ವಸತಿ ಶಾಲೆಗಳ ಕಟ್ಟಡ ನಿರ್ಮಾಣ, ಆವಾರ ಗೋಡೆಗಳ ನಿರ್ಮಾಣ, ಪೀಠೋಪಕರಣ, ಪ್ರಯೋಗಾಲಯ ನಿರ್ಮಾಣಕ್ಕಾಗಿ ₹ 39 ಕೋಟಿ 95 ಲಕ್ಷ ಮಂಜೂರಿಯಾಗಿದೆ ಎಂದು ಹೇಳಿದರು.
ಎಸ್ ಟಿಪಿ ಹಾಗೂ ಟಿಎಸ್ಪಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ₹1 ಕೋಟಿ 25 ಲಕ್ಷ, ಗಿರಿಜನ ಉಪಯೋಜನೆ ಯಡಿಯಲ್ಲಿ ₹25 ಲಕ್ಷ ಮಂಜೂರಿ, ಗ್ರಾಮೀಣ ಮಹಿಳೆಯರಲ್ಲಿ ಕೋಳಿ ಸಾಕಣೆ ಉತ್ತೇಜಿಸಲು ಮಹಿಳಾ ಸ್ವ ಸಹಾಯ ಸಂಘದ ಮುಖಾಂತರ ಫಲಾನುಭವಿ ಮಹಿಳಾ ಸದಸ್ಯರಿಗೆ ಉಚಿತ ಕೋಳಿ ಮರಿ ವಿತರಣೆ ಮಾಡಲಾಗುವುದು. ಪಟ್ಟಣದ ಶಿವಾಜಿ ಪಿಯುಸಿ ಕಾಲೇಜುನಲ್ಲಿ ವಾಹನ ತಂತ್ರಜ್ಞಾನ ಪ್ರಯೋಗಾಲಯ ನಿರ್ಮಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.