
ಪ್ರಜಾವಾಣಿ ವಾರ್ತೆ
ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ): ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಲೆ ಮಾಡಿ, ಮನೆ ಆವರಣದಲ್ಲೇ ಹೂತು ಹಾಖಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಪಟ್ಟಣದ ಸರೋಜಿನಿ ಮೇಲಿನಮನಿ (45) ಕೊಲೆಯಾದವರು. ಪತಿ, ಉದ್ಯಮಿ ಪ್ರಭು ರತ್ನಾಕರ (46) ಕೊಲೆ ಆರೋಪಿ. ಖಾರ ಕುಟ್ಟುವ ಹಾರೆಯಿಂದ ಸರೋಜಿನಿ ಅವರ ಕೊಲೆ ಮಾಡಿ, ಮನೆ ಆವರಣದಲ್ಲಿ ತೆಗ್ಗು ತೋಡಿ ಮೃತದೇಹವನ್ನು ಹೂತು ಹಾಕಿದ್ದರು. ನಂತರ ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಫೆಬ್ರುವರಿ 17ರಂದು ಪ್ರಭು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೃತ್ಯವೆಸಗಿರುವುದು ದೃಢಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸರೋಜಿನಿಯವರ ತಾಯಿ ದೇವರಹಿಪ್ಪರಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.