
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ಚಿತ್ರಕೃಪೆ: ಮೆಟಾ ಎಐ
ವಿಜಯಪುರ: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆಗೂದಲು ಕಿತ್ತು ಗಾಯಗೊಳಿಸಿದ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ (31) ಅವರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆಕೆಯ ಪತಿ ದುಂಡೇಶ ದಳವಾಯಿ, ಮಾವ ಬಸಪ್ಪ ದಳವಾಯಿ, ಅತ್ತೆ ಸತ್ಯವ್ವ ದಳವಾಯಿ, ಮಾಟಗಾತಿ ಮಂಗಳ ಕೋಲಕಾರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮೂವರು ಹೆಣ್ಣು ಮಕ್ಕಳನ್ನು ಹೆತ್ತಿದ್ದೇನೆ ಎಂಬ ಕಾರಣಕ್ಕೆ ಪತಿ, ಅತ್ತೆ, ಮಾವ ಕಿರುಕುಳ ನೀಡುತ್ತಿದ್ದರು. ವಿನಾಕಾರಣ ನನ್ನಲ್ಲಿ ದೇಹದಲ್ಲಿ ದೆವ್ವ ಬಂದಿದೆ ಎಂದು ದೌರ್ಜನ್ಯ ಎಸಗಿದರು’ ಎಂದು ಜ್ಯೋತಿ ದಳವಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.