ADVERTISEMENT

ಇಫ್ತಾರ್ ಕೂಟ ಸಾಮರಸ್ಯದ ಪ್ರತೀಕ: ವಿರುಪಾಕ್ಷಯ್ಯ ಹಿರೇಮಠ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 13:49 IST
Last Updated 22 ಮಾರ್ಚ್ 2025, 13:49 IST
ತಾಳಿಕೋಟೆ ಪಟ್ಟಣದ ಬಾವಾಪ್ಯಾರೆ ಬಡಾವಣೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾಂದಾರ ಅವರು ಗುರುವಾರ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಿದ್ದರು
ತಾಳಿಕೋಟೆ ಪಟ್ಟಣದ ಬಾವಾಪ್ಯಾರೆ ಬಡಾವಣೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾಂದಾರ ಅವರು ಗುರುವಾರ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಿದ್ದರು   

ತಾಳಿಕೋಟೆ: ‘ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಮರು ಎಲ್ಲ ಸಮಾಜದವರನ್ನು ಒಂದೂಗೂಡಿಸಿ ನಡೆಸುವ ಇಂತಹ ಸೌಹಾರ್ದ ಇಫ್ತಾರ್ ಕೂಟಗಳಿಂದ ಸಮಾಜದಲ್ಲಿ ಸಾಮರಸ್ಯ ಇನ್ನಷ್ಟು ಬೆಳೆಯುತ್ತದೆ’ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ(ಹಂಪಿ ಮುತ್ಯಾ) ಅಭಿಪ್ರಾಯಪಟ್ಟರು.

ಪಟ್ಟಣದ ಬಾವಾಪ್ಯಾರೆ ಬಡಾವಣೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾಂದಾರ ಅವರು ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಗೈಬೂಶಾ ಮಕಾಂದಾರ ಅವರು ಪಟ್ಟಣದ ಎಲ್ಲ ಸಮಾಜದವರೊಂದಿಗೆ ಅನೋನ್ಯತೆ ಹೊಂದಿದ್ದಾರೆ. ಇದು ಪ್ರತಿಯೊಬ್ಬರಲ್ಲೂ ಮೂಡಬೇಕು. ಜಾತಿ, ಧರ್ಮ ಎನ್ನದೆ ಎಲ್ಲರೂ ಒಂದೇ ಎಂದು ಭಾವಿಸಿ ಬದುಕಬೇಕು’ ಎಂದು ತಿಳಿಸಿದರು.

ADVERTISEMENT

ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು.‍ ಪ್ರಮುಖರಾದ ದಶರಥಸಿಂಗ್ ಮನಗೂಳಿ, ಗನಿಸಾಬ ಲಾಹೋರಿ, ಪ್ರಭುಗೌಡ ಮದರಕಲ್, ಶರಣಗೌಡ ದೊಡ್ಡಮನಿ, ರಾಜು ಹಯ್ಯಾಳ, ಮಸೂಮಸಾಬ ಕೆಂಭಾವಿ, ರೋಶನ್ ಡೋಣಿ, ಚನ್ನಬಸು ಕಟ್ಟಿಮನಿ, ಅಬ್ದುಲ್ ಸತ್ತಾರ ಅವಟಿ, ಸಿಕಂದರ ವಠಾರ, ನಿರಂಜನಶಾ ಮಕಾಂದಾರ, ನಬಿ ಹುಣಶ್ಯಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.