ADVERTISEMENT

ಇಂಡಿ: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:43 IST
Last Updated 19 ಜನವರಿ 2026, 2:43 IST
ಇಂಡಿ ಬಸ್ ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರಿಗೆ ದೇವರಹಿಪ್ಪರಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು    
ಇಂಡಿ ಬಸ್ ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರಿಗೆ ದೇವರಹಿಪ್ಪರಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು       

ಇಂಡಿ: ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ, ದೇವರ ಹಿಪ್ಪರಗಿ ನಿವಾಸಿಗಳು ಭಾನುವಾರ ಇಂಡಿಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಯ ಕಡೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್‌ಗಳು ಓಡಾಡುತ್ತವೆ. ಬೇರೆ ಊರಿಗೆ ಹೋಗುವ ಬಸ್‌ಗಳ ಸೌಲಭ್ಯ ಇದೆ. 
ಆದರೆ ಯಾವ ಬಸ್ಸುಗಳೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ನೌಕರಿ ಮಾಡುವವರಿಗೆ ಕಚೇರಿ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆ’ ಎಂದರು.

ಅಕ್ಷಯಕುಮಾರ ಯಾಳಗಿ, ಅರುಣ ರಾಠೋಡ, ರೇಣುಕಾ ಪ್ಯಾಟಿ, ಶಮಲಾ ವಾಲಿಕಾರ, ಕವಿತಾ ಬಿರಾದಾರ, ಅನ್ನಪೂರ್ಣ ಹರವಾಳ, ಲಕ್ಷ್ಮೀ ಶವರ್ಣ,  ಪ್ರಿಯಾಂಕಾ ತೆಲಗಿನತೋಟ, ಶ್ರೀದೇವಿ ಕುಮಟಗಿ, ಲಕ್ಷ್ಮೀ ಅಳ್ಳಗಿ, ಮಂಜುನಾಥ ರಾಠೋಡ, ಎಂ.ಆರ್.ಸುರಪುರ ಪ್ರತಿಭಟನೆಯಲ್ಲಿ ಇದ್ದರು.

ADVERTISEMENT

ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.