
ಪ್ರಜಾವಾಣಿ ವಾರ್ತೆ
ಇಂಡಿ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದದಲ್ಲಿ ಜರುಗಿದೆ.
ಬಸವರಾಜ ಬಿರಾದಾರ ಜಮೀನಿನಲ್ಲಿ ಈ ಘಟನೆ ಈಚೆಗೆ ನಡೆದಿದೆ. ಎಳ್ಳು ಅಮಾವಾಸ್ಯೆ ನಿಮಿತ್ಯ ಮನೆ ಮಂದಿ ಎಲ್ಲ ಹಬ್ಬದ ಸಡಗರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಮಾವಿನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಕಬ್ಬಿಗೆ ಹತ್ತಿದ ಬೆಂಕಿ ನಂದಿಸಲು ವಾಹನ ತಿರುಗಿಸಿದ್ದಾರೆ. ಅತ್ತ ಬೆಂಕಿ ನಂದಿಸುವಷ್ಟರಲ್ಲಿ ಇತ್ತ ಲಚ್ಯಾಣದ ಬಸವರಾಜ ಹೊಸಮನಿ ಅವರ ಜಮೀನಿನಲ್ಲಿನ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಪ್ರಕರಣ ಇಂಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.