ADVERTISEMENT

ವಿಜಯಪುರ| ಜ್ಞಾನಾರಾಧನೆಯ ದೇಶ ಭಾರತ: ಚಿಂತಕ ರಘುನಂದನ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:21 IST
Last Updated 1 ಫೆಬ್ರುವರಿ 2026, 4:21 IST
<div class="paragraphs"><p>ವಿಜಯಪುರದ ದರ್ಬಾರ್‌ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಹಿಂದೂ ಸಮಾವೇಶದಲ್ಲಿ ಚಿಂತಕ ರಘುನಂದನ&nbsp; ಮಾತನಾಡಿದರು&nbsp;</p></div>

ವಿಜಯಪುರದ ದರ್ಬಾರ್‌ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಹಿಂದೂ ಸಮಾವೇಶದಲ್ಲಿ ಚಿಂತಕ ರಘುನಂದನ  ಮಾತನಾಡಿದರು 

   

ವಿಜಯಪುರ: ‘ಹಿಂದೂ ಸಮಾಜ ಮೃತ್ಯಂಜಯ ಸಮಾಜ, ಜಗತ್ತಿಗೆ ಒಳ್ಳೆಯದನ್ನು ಕೊಡುವ ಶಕ್ತಿ ಭಾರತಕ್ಕೆ ಇದೆ, ಈ ಶಕ್ತಿ ಮತ್ತೆ ಪುನರ್ ಸ್ಥಾಪನೆಯಾಗುತ್ತಿದೆ. ಭಕ್ತಿ, ಆಯುರ್ವೇದ, ವಿಜ್ಞಾನ, ಗಣಿತ ನೀಡಿದ ಭಾರತ ಜ್ಞಾನಾರಾಧನೆಯ ದೇಶ’ ಎಂದು ಹಿಂದೂ ಸಮಾಜದ ಚಿಂತಕ ರಘುನಂದನ್‌ ಹೇಳಿದರು.

ನಗರದ ದರ್ಬಾರ್‌ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ADVERTISEMENT

‘ಬಲಗೈ ಶ್ರೇಷ್ಠ, ಎಡಗೈ ಕನಿಷ್ಠ ಎಂಬ ಮನೋಭಾವ ಮನುಷ್ಯನಲ್ಲಿದೆ, ಬಲಗಾಲಿಟ್ಟು ಒಳಗೆ ಬಾ ಎಂದು ಹೇಳುತ್ತಾರೆ, ಹಾಗಾದರೆ ಎಡಗಾಲು ಎಲ್ಲಿ ಇಡಬೇಕು, ಎಡಗಾಲು ಇರಿಸದೇ ಹೋದರೆ ಮನೆ ಪ್ರವೇಶಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಅಧರ್ಮ ಮಾರ್ಗದಲ್ಲಿ ಸಂಪಾದನೆ ಬೇಡ ಎಂದು ಹಿಂದೂ ಧರ್ಮ ಬೋಧಿಸಿದೆ, ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರುವಾಗುವ ಜೊತೆಗೆ ಸಂಪದ್ಭರಿತ ರಾಷ್ಟ್ರವಾಗಲಿದೆ’ ಎಂದು ಭವಿಷ್ಯ ನುಡಿದರು.

‘ಭಾರತ ಏಕೈಕ ಮಾತೃ ಪ್ರಧಾನ ಸಮಾಜ, ಸ್ತ್ರೀಯರನ್ನು ದೇವರು ಎಂದು ಗುರುತಿಸಿದ ಸಮಾಜ ನಮ್ಮದು’ ಎಂದರು.

ಬಾಲಗಾಂವದ  ಅಮೃತನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಸಂಚಾಲಕ ಅಂಬಾದಾಸ ಜೋಶಿ, ವಿಮಲಾ ಹಂದಿಗೋಳ, ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಡಾ. ಸಂಜು ಜೋಶಿ, ಉಮೇಶ ಕಾರಜೋಳ, ಶರಣು ಸಬರದ, ಶಿವಾನಂದ ಭೂಯ್ಯಾರ, ಪ್ರಕಾಶ್ ಮಿರ್ಜಿ, ಪಾಲಿಕೆ ಸದಸ್ಯರಾದ ಜವಾಹರ ಗೋಸಾವಿ, ಗೋಪಾಲ ಘಟಕಾಂಬಳೆ, ಸ್ವಪ್ನಾ ಕಣಮುಚನಾಳ, ರಾಮ್ ಸಿಂಗ್ ಹಜೇರಿ, ಸಂದೀಪ್ ಪಾಟೀಲ, ಮಹೇಂದ್ರ ನಾಯಕ, ವಿಜಯ್ ಜೋಶಿ, ಸಿದ್ದು ಮಲ್ಲಿಕಾರ್ಜುನ ಮಠ, ವಿಕಾಸ ಪದಕಿ, ಪವನ ಜೋಶಿ, ವಿಶಾಲ ಪಾಟೀಲ, ಸಂಗಮೇಶ ಬಿರಾದಾರ, ವೆಂಕಟೇಶ್ ಗುಡಿ  ಇದ್ದರು.

ಸಮಾವೇಶಕ್ಕೂ ಮುನ್ನಾ ನಗರದ ಶ್ರೀ ಪ್ರಸನ್ನ ಗಣೇಶ ದೇವಸ್ಥಾನ ಪ್ರಾರಂಭವಾದ ಶೋಭಾ ಯಾತ್ರೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ದರ್ಬಾರ್ ಹೈ ಸ್ಕೂಲ್ ಮೈದಾನದಲ್ಲಿ ಸಂಪನ್ನಗೊಂಡಿತು.

ಜಾತಿ ಮತ ಪಂಥಗಳು ಬಿಡಿ ಬಿಡಿ ಹೂವುಗಳಿದ್ದಂತೆ. ಈ ಎಲ್ಲವುಗಳನ್ನು ಸಮರಸ ಎಂಬ ದಾರದಲ್ಲಿ ಪೋಣಿಸಿದಾಗ ವಿಶ್ವಭಾವ ಎಂಬ ಹಾರ ಸಿದ್ದವಾಗುತ್ತದೆ
ರಘುನಂದನ್‌, ಹಿಂದೂ ಸಮಾಜದ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.