ADVERTISEMENT

ಇಂಡಿ: ಸಮಗ್ರ ನೀರಾವರಿಯೋಜನೆಗೆ ಜೆಡಿಎಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 4:51 IST
Last Updated 16 ಫೆಬ್ರುವರಿ 2022, 4:51 IST
ಇಂಡಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು  ಪೂಜೆ ಸಲ್ಲಿಸಿ, ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದರು
ಇಂಡಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು  ಪೂಜೆ ಸಲ್ಲಿಸಿ, ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದರು   

ಇಂಡಿ: ಇಂಡಿ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗೆ ಆಗ್ರಹಿಸಿ 42 ದಿನ ಧರಣಿ ಸತ್ಯಾಗ್ರಹ ನಡೆಸಿದರೂ ಸ್ಪಂದನೆ ಸಿಗಲಿಲ್ಲ. ಈಗ ಗಂಗಾ ಪೂಜೆಯ ಮೂಲಕ ಹೋರಾಟಕ್ಕೆ ಮತ್ತೆ ಚಾಲನೆ ನೀಡಿದ್ದೇವೆ ಎಂದರು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು.

ಮಂಗಳವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಇಂಡಿ ತಾಲ್ಲೂಕಿನಲ್ಲಿರುವ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ, ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಪೂರೈಸಬೇಕೆಂದು. ಬಜೆಟ್ ನಲ್ಲಿ ಇವುಗಳಿಗಾಗಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರ ಇಂಡಿ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದರು. ಮುಖಂಡರಾದ ಶೋಭಾ ಕಟ್ಟಿ, ಕಾಶಿಬಾಯಿ ಗುಡ್ಲ್, ರೇಖಾ ಶಿಂಗೆ, ಜಕ್ಕಪ್ಪ ಗುಡ್ಲ್, ದುಂಡು ಮಡ್ನಳ್ಳಿ, ಮದ್ಮಮ್ಮ ರೂಗಿ, ಶ್ರೀಶೈಲ ರೂಗಿ, ಮಾಳಪ್ಪ ಗುಡ್ಲ್, ಅಯೂಬ ನಾಟೀಕಾರ, ಸಿದ್ದು ಡ ಮಗಾ, ಮಹಿಬೂಬ್ ಬೇವನೂರ, ಮರೆಪ್ಪ ಗಿರಣಿವಡ್ಡರ, ನಾನಾಗೌಡ ಪಾಟೀಲ, ದುಂಡು ಬಿರಾದಾರ, ರಾಜು ಮುಲ್ಲಾ, ಡಾ. ರಮೇಶ ಬಿರಾದಾರ, ಬಾಬು ಮೇತ್ರಿ, ಮಾಳು ಮ್ಯಾಕೇರಿ, ತಮ್ಮನಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.