ADVERTISEMENT

ಜೆಇಇ ಮೇನ್ಸ್: ಎಕ್ಸಲೆಂಟ್‌ಗೆ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 11:22 IST
Last Updated 9 ಮಾರ್ಚ್ 2021, 11:22 IST
ನಂದಿನಿ ಚೌಕಿಮಠ
ನಂದಿನಿ ಚೌಕಿಮಠ   

ವಿಜಯಪುರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‍ಟಿಎ) ಫೆಬ್ರುವರಿಯಲ್ಲಿ ನಡೆಸಿದ ಜೆಇಇ ಮೇನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಎಕ್ಸಲೆಂಟ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ನಂದಿನಿ ಚೌಕಿಮಠ ಶೇ 99.31 ಅಂಕ ಪಡೆದು ಕಾಲೇಜಿಗೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಶ್ರವಣಕುಮಾರ ಬಿರಾದಾರ ಶೇ 95.49, ಶರಣಬಸಯ್ಯ ಹಿರೇಮಠ ಶೇ 93.88, ಅಭಿಷೇಕ ಕಿಣಗಿ ಶೇ 91.96, ಪ್ರಣಾಲಿ ಜಾಧವ ಶೇ 91.23, ಅಭಿಷೇಕ ಕಟ್ಟಿಮನಿ ಶೇ 91.07, ಸಮೀರ ಕುಲಕರ್ಣಿ ಶೇ 90, ಅಭಿಷೇಕ ಅವಟಿ ಶೇ 89.35, ಪ್ರಶಾಂತ ಬಿರಾದಾರ ಶೇ 88.26, ಸಯ್ಯದ್ ಅರ್ಸಲನ್ ಇನಾಮದಾರ ಶೇ 88.04, ಪ್ರಣಮ್ಯ ಬಿರಾದಾರ ಶೇ 86.20, ಸಹನಾ ಕೋಳೂರ ಶೇ 85.54, ಗಗನ್ ಕೌಲಗಿ ಶೇ 83.13 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರ್‍ಮನ್ ಬಸವರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.