ಚಿನ್ನಾಭರಣ(ಸಾಂದರ್ಭಿಕ ಚಿತ್ರ)
ತಾಳಿಕೋಟೆ: ಪಟ್ಟಣದ ಗಣೇಶನಗರ ನಿವಾಸಿ, ಎಂಜಿನಿಯರ್ ಅಬ್ದುಲ್ ಹಮೀದ್ ಎಂ. ಕೋಳ್ಯಾಳ ಅವರ ಮನೆಯಲ್ಲಿ ₹ 12.63 ಲಕ್ಷ ಮೌಲ್ಯದ ಚಿನ್ನಾಭರಣಗಳು ಈಚೆಗೆ ಕಳ್ಳತನವಾಗಿವೆ.
‘ಡಿ.8 ರಿಂದ 11 ರ ಅವಧಿಯಲ್ಲಿ ಮನೆ ಮಾಲೀಕರು ಬೀಗ ಹಾಕಿಕೊಂಡು ಹೊರ ಹೋದ ಸಂದರ್ಭದಲ್ಲಿ ಇಂಟರ್ ಲಾಕ್ ಮುರಿದು ಒಳಹೊಕ್ಕಿದ ಕಳ್ಳರು, ಕಳವು ಮಾಡಿದ್ದಾರೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.