
ಪ್ರಜಾವಾಣಿ ವಾರ್ತೆ
ಕನೇರಿ ಶ್ರೀ
ವಿಜಯಪುರ: ‘ಕನೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧ ಖಂಡಿಸಿ ಹೋರಾಟ ರೂಪುರೇಷೆ ಚರ್ಚಿಸಲು ಬೆಳಗಾವಿಯಲ್ಲಿ ಅ.29ರಂದು ಸಭೆ ನಡೆಸಲಾಗುವುದು’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಿಂದೂ ಧರ್ಮ, ವೀರಶೈವ, ಲಿಂಗಾಯತ ಸಮಾಜದವರಿಗೆ ತೊಂದರೆ ಕೊಡುತ್ತಿದೆ. ವೀರಶೈವ ಸಮಾಜವನ್ನು ವಿಭಜನೆ ಮಾಡುತ್ತಿದೆ. ಹಿಂದೂ ಧರ್ಮದ ಸಾಧು ಸಂತರನ್ನೂ ಬಿಡುತ್ತಿಲ್ಲ’ ಎಂದು ಆರೋಪಿಸಿದರು.
‘ಸಭೆಗೆ ಬರುವಂತೆ ಕನೇರಿ ಶ್ರೀಗಳಿಗೂ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
‘ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಏನೂ ಗೊತ್ತಿಲ್ಲ. ನಿರ್ಬಂಧ ವಾಪಸ್ ಪಡೆಯಲು ಇವರು ಯಾರು? ನಿರ್ಬಂಧ ವಾಪಸ್ ತೆಗೆದುಕೊಳ್ಳಲು ಸಚಿವ ಸಂಪುಟ ಸಂಪೂರ್ಣ ಅಧಿಕಾರ ನೀಡಿದೆ ಎಂದು ಹೇಳಲಿ ನೋಡೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.