
ರಾಷ್ಟ್ರೀಯ ಶೀರ್ಷಿಕೆ ಬೆಲ್ಟ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಾಳಿಕೋಟೆ ಪಟ್ಟಣದ ಡಸರ್ಟ್ ವಾರಿಯರ್ ಕರಾಟೆ ಶಾಲೆಯ ಒಂಭತ್ತು ಫೈಟರ್ ಗಳು ಭಾಗವಹಿಸಿ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡರು.
ತಾಳಿಕೋಟೆ: ಬೆಂಗಳೂರಿನಲ್ಲಿ ಜ.9 ಮತ್ತು 10 ರಂದು ಜರುಗಿದ 6 ಗೋಲ್ಡನ್ ಮೊಂಗ್ಖಾನ್ (ಮುಆಯ್ ಥಾಯ್ ಫೈಟಿಂಗ್ ಟೂರ್ನಾಮೆಂಟ್) ರಾಷ್ಟ್ರೀಯ ಶೀರ್ಷಿಕೆ ಬೆಲ್ಟ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಾಳಿಕೋಟೆ ಪಟ್ಟಣದ ಡಸರ್ಟ್ ವಾರಿಯರ್ ಕರಾಟೆ ಶಾಲೆಯ ಒಂಭತ್ತು ಫೈಟರ್ ಗಳು ಭಾಗವಹಿಸಿ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡರು.
ಪ್ರೀತಮ್ ರಜಪೂತ ಮತ್ತು ವಾಜೀದ್ ತಾಳಿಕೋಟಿ –ಚಿನ್ನದ ಪದಕ, ಶಶಿಕಾಂತ ಸುಗತೇಕರ ಹಾಗೂ ಮುಹಫೀಜ್ ಡೋಣಿ –ಬೆಳ್ಳಿ ಹಾಗೂ ತಯ್ಯಬಾ ನಡುವಿನಮನಿ, ವೀರಸಿಂಗ ವಿಜಾಪುರ, ಮುಆಜ್ ಬಿಲ್ವಾರ, ಇಮ್ರಾನ ಬಿದರಿ ಕಂಚಿನ ಪದಕ ಪಡೆದರು.
ಇದರೊಂದಿಗೆ ಮಾರ್ಚ್ 10 ರಿಂದ 20ರವರೆಗೆ ಥೈಲ್ಯಾಂಡ್‌ನಲ್ಲಿ ಜರುಗಲಿರುವ ಅಂತರರಾಷ್ಟ್ರೀಯ ಪಂಧ್ಯಾವಳಿಗೆ ಚಿನ್ನದ ಪದಕದ ವಿಜೇತರು ಭಾಗವಹಿಸಲಿದ್ದಾರೆ. ಕೋಚ್ ಮಶ್ಯಾಕ ಮುಲ್ಲಾ ಇವರನ್ನು ತರಬೇತುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.