ಚಡಚಣ: 100 ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವಲ್ಲಿ ಯಾವಗಲೂ ಮುಂದೆ ಇರುತ್ತದೆ ಎಂದು ಕರ್ನಾಟಕ ಬ್ಯಾಂಕ್ ಎಜಿಎಂ ನಾಗಾರ್ಜುನ ರೆಡ್ಡಿ ಹೇಳಿದರು.
ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಸುಮಾರು ₹ 25 ಲಕ್ಷ ಬೆಲೆಯ ಶಾಲಾ ಬಸ್ ದೇಣೀಗೆ ನೀಡಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ಅಧ್ಯಯನ ಮಾಡಿದ ಚಡಚಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಬಸ್ ನೀಡುತ್ತಿರುವುದು ಕರ್ನಾಟಕ ಬ್ಯಾಂಕಿಗೂ ಹೆಮ್ಮೆ ಎಂದರು.
ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್ ಚೋರಗಿ ಮಾತನಾಡಿ, ಕರ್ನಾಟಕ ಬ್ಯಾಂಕಿನ ಸಹಾಯವನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಯಾವಾಗಲೂ ಸ್ಮರಿಸಲಿದೆ ಎಂದರು. ನಂತರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಕೆಬಿಎಲ್ ಬ್ಯಾಂಕ್ ನ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕ್ಲಸ್ಟರ್ ಹೆಡ್ ಪವನ ಕುಮಾರ, ಸ್ಥಳೀಯ ಕೆಬಿಎಲ್ ಬ್ಯಾಂಕ್‌ನ ವ್ಯವಸ್ಥಾಪಕ ಗೋಪಿಚಂದ, ಸಹಾಯಕ ಮ್ಯಾನೇಜರ್ ಪುನೀತ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್. ಗಿಡವೀರ, ಪ್ರಾಚಾರ್ಯ ಮನೋಜ ಕಟಗೇರಿ, ಮುಖ್ಯಶಿಕ್ಷಕ ಎಚ್.ಆರ್ ಬಗಲಿ, ಪ್ರಕಾಶ ಕಟಗೇರಿ, ಕಲ್ಪನಾ ವಾಘಮೋಡೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.