ADVERTISEMENT

SSLC Result 2022 | ವಿಜಯಪುರ; ಕೂಲಿ ಮಾಡುವ ಮಾದೇವಿ ಮಗ ಎಸ್ಸೆಸ್ಸೆಲ್ಸಿ ಟಾಪರ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 10:28 IST
Last Updated 19 ಮೇ 2022, 10:28 IST
ಅಮಿತ್ ಮಾದರ
ಅಮಿತ್ ಮಾದರ   

ವಿಜಯಪುರ: ತಾಲ್ಲೂಕಿನ ಜುಮನಾಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅಮಿತ್ ಮಾದರ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ 625 ಅಂಕ ಗಳಿಸುವ ಮೂಲಕ ರಾಜ್ಯದ ಟಾಪರ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಅಮಿತ್ ಅವರ ತಂದೆ ಆನಂದ ನಿಧನರಾಗಿದ್ದು, ಕೂಲಿಕಾರರಾದ ತಾಯಿ ಮಾದೇವಿ ಕಡು ಬಡತನದಲ್ಲೇ ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ.

ಯೋಗ, ವಾಲಿಬಾಲ್ ಕ್ರಿಡೆಯಲ್ಲಿ ಮುಂಚೂಣಿಯಲ್ಲಿರುವ ಅಮಿತ್‌ಗೆ ಭವಿಷ್ಯದ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವು ಅಗತ್ಯವಿದೆ ಎಂದು ತಾಯಿ ಮಾದೇವಿ ತಿಳಿಸಿದರು.

ADVERTISEMENT

ಮಾದೇವಿ ಅವರಿಗೆ ಮೂವರು ಗಂಡು ಮಕ್ಕಳು. ಮೊದಲನೇ ಪುತ್ರ ಅಮೋಘ ಸಿದ್ದ ಬಿ.ಇಡಿ, ಎರಡನೇ ಪುತ್ರ ಅಭಿಲಾಷ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಮಕ್ಕಳನ್ನು ಮಾದೇವಿ ಕೂಲಿ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.