ADVERTISEMENT

ಕಾರ್ತಿಕ ಏಕಾದಶಿ ಯಾತ್ರೆ: ₹ 5 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 6:09 IST
Last Updated 2 ನವೆಂಬರ್ 2025, 6:09 IST
<div class="paragraphs"><p>ಹಣ </p></div>

ಹಣ

   

ಸೋಲಾಪುರ: ಪಂಢರಪುರ ಕಾರ್ತಿಕ ಏಕಾದಶಿ ಯಾತ್ರೆಗೆ ಸರ್ಕಾರ ಹೆಚ್ಚುವರಿ ₹5 ಕೋಟಿ ಅನುದಾನ ನೀಡಿರುವುದಾಗಿ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ತಿಳಿಸಿದ್ದಾರೆ.

ಕಾರ್ತಿಕ ವಾರಿಗೆ ಬರುವ ವಾರಕರಿಗಳಿಗೆ ಸ್ವಚ್ಛತೆ, ಆರೋಗ್ಯ ಸೌಲಭ್ಯಗಳು, ಸ್ವಚ್ಛ ಕುಡಿಯುವ ನೀರು ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವರ್ಷ ಯಾತ್ರಿಕರಿಗಾಗಿ ಜಿಲ್ಲಾಡಳಿತದಿಂದ ಆರು ಲಕ್ಷ ನೀರಿನ ಬಾಟಲಿ ಹಾಗೂ ಆರು ಲಕ್ಷ ಜ್ಯೂಸ್ ಬಾಟಲಿಗಳನ್ನು ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಪಂಢರಪುರ ಕಾರಿಡಾರ್ ಕುರಿತು ಸ್ಥಳೀಯರೊಂದಿಗೆ ಸಭೆ ನಡೆಸಿ, ಅದರ ಬಗ್ಗೆ ಸಕಾರಾತ್ಮಕ ಪರಿಹಾರ ಕಂಡುಹಿಡಿಯಲಾಗಿದೆ. ಇದರ ಪರಿಣಾಮವಾಗಿ ಕಾರಿಡಾರ್‌ ಸಂಬಂಧಿತ ಬಹುತೇಕ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಮುಂದಿನ ವಾರ ಜಿಲ್ಲಾ ಮಟ್ಟದ ಸಭೆ ನಡೆಸಿ, ಅನುಮೋದನೆಗಾಗಿ ಪ್ರಸ್ತಾವನೆಯನ್ನು ಉಸ್ತುವಾರಿ ಸಚಿವ ಜಯಕುಮಾರ ಗೋರೆ ಅವರ ಬಳಿ ಸಲ್ಲಿಸಲಾಗುತ್ತದೆ. ನಂತರ ಉಸ್ತುವಾರಿ ಸಚಿವರು ಅದನ್ನು ಹೈಪವರ್ ಸಮಿತಿಗೆ ಸಲ್ಲಿಸುತ್ತಾರೆ ಮತ್ತು ಅದರ ಮೇಲೆ ಮುಖ್ಯಮಂತ್ರಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಹೇಳಿದರು.

ಪಂಢರಪುರ ಕಾರಿಡಾರ್‌ ಯೋಜನೆ ₹3 ಸಾವಿರ ಕೋಟಿಗಿಂತ ಹೆಚ್ಚು ವೆಚ್ಚದ ಯೋಜನೆಯಾಗಿದೆ. ಇದರಲ್ಲಿ ಭಕ್ತರಿಗಾಗಿ ಮೂಲಸೌಕರ್ಯ ಮತ್ತು ದೇವಾಲಯ ಪ್ರದೇಶದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಈ ಯೋಜನೆಯಲ್ಲಿ ಅನೇಕ ಆಸ್ತಿಗಳ ಭೂಸ್ವಾಧೀನ ನಡೆಯಲಿದೆ. ಬಾಧಿತ ಆಸ್ತಿ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಗರಾಭಿವೃದ್ಧಿ ವಿಶೇಷ ಯೋಜನೆಯ ಅಡಿಯಲ್ಲಿ ಮಹಾನಗರ ಪಾಲಿಕೆಗಳಿಗೆ ಅನುದಾನ ಮಂಜೂರು ಮಾಡುವ ಕುರಿತು  2025-26ರ ಹಣಕಾಸು ವರ್ಷದ  ಶೀರ್ಷಿಕೆಯಡಿ ಸೋಲಾಪುರ ಜಿಲ್ಲೆಯ ಪಂಢರಪುರ ನಗರಪಾಲಿಕೆಗೆ ₹ 2.75 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.