ADVERTISEMENT

ಈ ಹೊತ್ತಿಗೆಯ ಕಾವ್ಯ ಕಮ್ಮಟ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 23:31 IST
Last Updated 2 ಜೂನ್ 2023, 23:31 IST

ವಿಜಯಪುರ: ಅರಕೇರಿಯ ಜ್ಞಾನಜ್ಯೋತಿ ವಸತಿ ಶಾಲೆ ಮತ್ತು ಪಿ. ಯು. ಕಾಲೇಜಿನಲ್ಲಿ 'ಈ ಹೊತ್ತಿಗೆ' ದಶಮಾನೋತ್ಸವದ ನಿಮಿತ್ಯ ಕರ್ನಾಟಕ ಲೇಖಕಿಯರ ಸಂಘ ವಿಜಯಪುರ ಶಾಖೆ ಮತ್ತು ಕರ್ನಾಟಕ ಎಜುಕೇಶನ್ ಟ್ರಸ್ಟ್  ಸಹಯೋಗದಲ್ಲಿ ಜೂನ್ 3 ಮತ್ತು 4 ರಂದು ಎರಡು ದಿನಗಳ ಕಾವ್ಯ ಕಮ್ಮಟ ಏರ್ಪಡಿಸಲಾಗಿದೆ.

ಜೂನ್‌ 3 ರಂದು ಬೆಳಿಗ್ಗೆ 9.30ಕ್ಕೆ ಕಮ್ಮಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಕಮ್ಮಟದ ನಿರ್ದೇಶಕಿ ಡಾ. ಎಂ ಎಸ್ ಆಶಾದೇವಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ರಾಜೇಂದ್ರ ಚೆನ್ನಿ, ಡಾ.ಚೆನ್ನಪ್ಪ ಕಟ್ಟಿ, ಕಥೆಗಾರ ಆರಿಫ್ ರಾಜ್, ಮಲ್ಲಿಕಾರ್ಜುನ ಲೋಣಿ ಉಪಸ್ಥಿತರಿರಲಿದ್ದಾರೆ.

‘ಈ ಹೊತ್ತಿಗೆ’ ಟ್ರಸ್ಟ್ ನ ಸಂಸ್ಥಾಪಕರಾದ ಅಭಿನೇತ್ರಿ, ಬರಹಗಾರ್ತಿ ಜಯಲಕ್ಷ್ಮಿ ಪಾಟೀಲ್ ಹಾಗೂ ಕಲೇಸಂ ವಿಜಯಪುರ ಶಾಖೆಯ ಅಧ್ಯಕ್ಷರಾದ ಹೇಮಲತಾ ವಸ್ತ್ರದ ಮತ್ತು ಕರ್ನಾಟಕ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ  ದಾಕ್ಷಾಯಿಣಿ  ಲೋಣಿ ಇವರು ಉಪಸ್ಥಿತರಿರುತ್ತಾರೆ.

ADVERTISEMENT

ಈ ಕಾವ್ಯಕಮ್ಮಟದಲ್ಲಿ ವಿಜಯಪುರ ಸಹಿತ ವಿವಿಧ ಜಿಲ್ಲೆಗಳಿಂದ 30 ಜನ ಕವಿಗಳು ಭಾಗವಹಿಸುತ್ತಿದ್ದಾರೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.