ಅಪಘಾತ
ಸಾಂದರ್ಭಿಕ ಚಿತ್ರ
ಕೊಲ್ಹಾರ: ಕೊಲ್ಹಾರ ಯುಕೆಪಿ ಕ್ರಾಸ್ ಸಮೀಪ ಕೊರೆಮ್ಮದೇವಿ ದೇವಸ್ಥಾನ ಹತ್ತಿರ ಶನಿವಾರ ರಾತ್ರಿ ವಾಹನ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಯುಕೆಪಿ ಕ್ರಾಸ್‌ದಿಂದ ರಾಷ್ಟ್ರೀಯ ಹೆದ್ದಾರಿ 52ರ ಮಾರ್ಗವಾಗಿ ಬೀಳಗಿ ಕಡೆಗೆ ಹೊರಟ್ಟಿದ ಆಟೋಗೆ ಹಿಂಬದಿಯಿಂದ ವಾಹನ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಅನ್ನಪೂರ್ಣಾ ನೇವಣಿ (39) ಸ್ಥಳದಲ್ಲೇ ಮೃತಪಟ್ಟರೆ, ಪಾರವ ಮಹಾಂತಪ್ಪ ಅನ್ನೆಪ್ಪನವರ (65) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇಬ್ಬರು ಮಹಿಳೆಯರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಮುತ್ತಲದಿನ್ನಿ ಆರ್.ಸಿ ಗ್ರಾಮದವರು. ಆಟೋದಲ್ಲಿದ್ದ ಇನ್ನುಳಿದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲ ರೈತರ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಊರಿನ ಕಡೆಗೆ ಹೊರಟಿದ್ದರು. ಸ್ಥಳಕ್ಕೆ ಕೊಲ್ಹಾರ ಪಿಎಸ್ಐ ಅಶೋಕ ನಾಯಕ ಹಾಗೂ ಪೋಲಿಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.