ADVERTISEMENT

ಕೃಷ್ಣನ ಸ್ನೇಹ, ಪ್ರೀತಿ ಅನುಕರಣೀಯ

ಕೃಷ್ಣ ಜನ್ಮಾಷ್ಠಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 14:24 IST
Last Updated 19 ಆಗಸ್ಟ್ 2022, 14:24 IST
ವಿಜಯಪುರ ನಗರದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿದ್ಯಾರ್ಥಿಗಳು ಕೃಷ್ಣ ವೇಷಧಾರಿಗಳಾಗಿ ಕಾಣಿಸಿಕೊಂಡರು.
ವಿಜಯಪುರ ನಗರದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿದ್ಯಾರ್ಥಿಗಳು ಕೃಷ್ಣ ವೇಷಧಾರಿಗಳಾಗಿ ಕಾಣಿಸಿಕೊಂಡರು.   

ವಿಜಯಪುರ: ನಗರದಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.

ಶ್ರೀ ಕೃಷ್ಣನ ಪುರಾಣದ ಐತಿಹ್ಯ ಮತ್ತು ಕೃಷ್ಣನ ಜನ್ಮದ ಕುರಿತು ಮಾತನಾಡಿದಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್. ಟಿ. ಲತಾದೇವಿ, ವಿದ್ಯಾರ್ಥಿಗಳು ಕೃಷ್ಣನ ಆದರ್ಶ, ಸತ್ಯ, ಸ್ನೇಹ ಪ್ರೀತಿಯನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಪಕ ಎಸ್. ಕುಮಾರ್‌ ಮಾತನಾಡಿ, ಭಗವಾನ್ ಶ್ರೀ ಕೃಷ್ಣನು ವಿಷ್ಣುವಿನ 8ನೇ ಅವತಾರ. ಕೃಷ್ಣಾಷ್ಟಮಿ ಭಾರತದ ಸಂಸ್ಕ್ರತಿಯಲ್ಲಿ ಆಚರಿಸಲ್ಪಡುವ ಒಂದು ಪ್ರಮುಖ ಹಬ್ಬವಾಗಿದೆ ಎಂದರು.

ADVERTISEMENT

ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶ್ರೀ ಭಗವಾನ್ ಕೃಷ್ಣನ ವಿವಿಧ ಉಡುಪುಗಳನ್ನು ಧರಿಸಿಕೊಂಡು ಕೃಷ್ಣ ವೇಷಧಾರಿಗಳಾಗಿ ಕಾಣಿಸಿಕೊಂಡರು.

ಶ್ರೀ ಕೃಷ್ಣನ ಭಾವಚಿತ್ರಕ್ಕೆ ಬಣ್ಣಗಳಿಂದ ಲೇಪನ ಮಾಡುವುದರ ಜೊತೆಗೆ ಶ್ರೀ ಕೃಷ್ಣನ ಹಾಡಿಗೆ ವಿದ್ಯಾರ್ಥಿಗಳು ನೃತ್ಯ , ಹಾಡುಗಳನ್ನು ಹಾಡಿ ಬೆಣ್ಣೆ ತಿನ್ನುವುದರ ಮೂಲಕ ಮತ್ತು ಮೊಸರು ಗಡಿಗೆಯನ್ನು ಒಡೆಯುವುದರ ಮೂಲಕ ಕೃಷ್ಣಾ ಜನ್ಮಾಷ್ಠಮಿ ಸಡಗರದಿಂದ ಆಚರಿಸಿದರು./

ಶಿಕ್ಷಕರು, ಪಾಲಕರು ತಮ್ಮ-ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾವು ಕೂಡ ಭಾಗಿಯಾಗಿದ್ದರು.ಶಿಕ್ಷಕರಾದ ಚಂದ್ರಾ ಜೈನ, ಸುಜಾತಾ, ಮಹಾನಂದಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.