ADVERTISEMENT

ವಿಜಯಪುರ | ಸಾರಿಗೆ ಮುಷ್ಕರ: ಆಟೋ, ಖಾಸಗಿ ಬಸ್ಸುಗಳ ಮೊರೆ ಹೋದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:41 IST
Last Updated 5 ಆಗಸ್ಟ್ 2025, 5:41 IST
   

ವಿಜಯಪುರ: ರಸ್ತೆ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದಲೇ ಮುಷ್ಕರ ಅರಂಭಿಸಿದ ಪರಿಣಾಮ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್‌ಗಳಿಲ್ಲದೇ ಪರದಾಡಿದರು.

ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ, ಸೆಟಲೈಟ್ ಬಸ್ ನಿಲ್ದಾಣ ಸೇರಿದಂತೆ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ತಾಳಿಕೋಟೆ, ಮುದ್ದೇಬಿಹಾಳ, ಆಲಮೇಲ, ಚಡಚಣ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಜನರು ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಬಸ್ ನಿಲ್ದಾಣಗಳಲ್ಲಿ ಕಾದು ಕುಳಿತಿದ್ದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸಹ ಪರದಾಡಿದರು.

ADVERTISEMENT

ಆಟೋ, ಟಂಟಂ, ಖಾಸಗಿ ಬಸ್ಸುಗಳು ನಿಲ್ದಾಣದ ಒಳಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು, ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವುದು ಕಂಡುಬಂದಿತು.

ಸಾರಿಗೆ ಮುಷ್ಕರದ ಪರಿಣಾಮ ನಗರ, ಪಟ್ಟಣಗಳಲ್ಲೂ ಜನ ಸಂಚಾರ, ವ್ಯಾಪಾರ, ವಹಿವಾಟು ತಗ್ಗಿತ್ತು.

ರಸ್ತೆಗಳಲ್ಲಿ ಕಾರು, ಬೈಕು, ಆಟೋ, ಟಂಟಂಗಳು, ಕುದುರೆ ಟಾಂಗಾಗಳ ಸಂಚಾರ ಅಧಿಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.