ADVERTISEMENT

ಕುಸಿದ ಕಟ್ಟಡದ ಸಜ್ಜಾ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 17:12 IST
Last Updated 4 ಏಪ್ರಿಲ್ 2019, 17:12 IST
ನಿಡಗುಂದಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಜ್ಜಾ ಬಿದ್ದಿರುವುದು
ನಿಡಗುಂದಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಜ್ಜಾ ಬಿದ್ದಿರುವುದು   

ನಿಡಗುಂದಿ: ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೂರನೇ ಅಂತಸ್ತಿನ ಸಜ್ಜಾ ಗುರುವಾರ ಏಕಾಏಕಿ ಕುಸಿದು ಬಿದ್ದು, ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ.

ಮೃತರನ್ನು ಬೇನಾಳ ಎನ್‌ಎಚ್‌ ಗ್ರಾಮದ ವೆಂಕಟೇಶ ನರಸಪ್ಪ ರಾಜನಾಳ (30) ಎಂದು ಗುರುತಿಸಲಾಗಿದೆ.

ಡಾ.ಸಂತೋಷ ಮಲ್ಲೇಶಪ್ಪ ಬಸರಕೋಡ, ಇಲ್ಲಿಯ ಕರಬಾದೇವಿ ದೇವಸ್ಥಾನದ ಬಳಿ ನೂತನ ಕಟ್ಟಡವನ್ನು ಒಂದು ವರ್ಷದಿಂದ ನಿರ್ಮಿಸುತ್ತಿದ್ದರು. ನೆಲ ಅಂತಸ್ತು ಮತ್ತು ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿತ್ತು. ಸದ್ಯ ಮೂರನೇ ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು. ಆ ಕಟ್ಟಡದಲ್ಲಿ ಎಲೆಕ್ಟ್ರಿಕಲ್‌ ಕಾಮಗಾರಿ ನಿರ್ವಹಿಸುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ದೂರು ದಾಖಲು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಮಹಡಿಯಿಂದ ಕೆಳಗೆ ಇಳಿಯುವಾಗ ನರಸಪ್ಪ ರಾಜನಾಳ ಆಯತಪ್ಪಿ ಕೆಳಕ್ಕೆ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ರತ್ನಾ ವೆಂಕಟೇಶ ರಾಜನಾಳ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪಿಎಸ್‌ಐ ಬಿ.ಬಿ.ಬಿಸನಕೊಪ್ಪ ತಿಳಿಸಿದರು.

ಅನುಮತಿ ಇರಲಿಲ್ಲ:ಈ ಕಟ್ಟಡದ ನಿರ್ಮಾಣಕ್ಕೆ 2018ರ ಜನವರಿಯಲ್ಲಿ ಕೇವಲ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಮೂರನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಎನ್‌.ತಹಶೀಲ್ದಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.