
ತಾಳಿಕೋಟೆ: ‘ಮನುಷ್ಯನ ಬದುಕು ಇಂದು ಯಾಂತ್ರಿಕೃತ ಗೊಂಡಿರುವುದರಿಂದ ಒತ್ತಡದಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಮಹಾಪುರುಷರ, ಸಂತ, ಶರಣರ ಜೀವನದ ಕುರಿತು ಪ್ರವಚನಗಳನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಿತ್ತದೆ’ ಎಂದು ದೇವರಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಾವದಗಿ ಗ್ರಾಮದ ಪರ್ವತೇಶ್ವರ ಬ್ರಹನ್ಮಠದ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ‘ಗುಡ್ಡಾಪುರದ ದಾನಮ್ಮ ದೇವಿ ಪುರಾಣ’ ಆರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ರಾಜೇಂದ್ರ ಶ್ರೀಗಳ ಗುರು ಪಟ್ಟಾಧಿಕಾರದ ಕಾರ್ಯಕ್ರಮವನ್ನು ಇಡೀ ನಾಡಿನಲ್ಲಿಯೇ ಹೆಸರುವಾಸಿಯಾಗಿ ಮಾಡಿದ್ದೀರಿ, ಪೂಜ್ಯರ ಹಾಗೂ ಮಠದ ಕುರಿತು ಹೊಂದಿರುವ ಅಪಾರ ಕಾಳಜಿ ತೋರಿಸುತ್ತದೆ. ಪುರಾಣ ಕಾರ್ಯಕ್ರಮ ಮಾರ್ಚ್ 2ರ ವರೆಗೆ ನಡೆಯಲಿದೆ ಎಂದರು.
ಸಾಸನೂರ ತುಂಬಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗಯ್ಯ ಹಿರೇಮಠ(ಶಹಾಪುರ) ಇದ್ದರು.
ಗ್ರಾಮ ದೇವಿಗೆ ಉಡಿತುಂಬಿ ಪರ್ವತೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಮೆರವಣಿಗೆಯೊಂದಿಗೆ ವೇದಿಕೆಗೆ ಆಗಮಿಸಲಾಯಿತು. ಪ್ರವಚನಕಾರ ರಾಚಯ್ಯ ಶಾಸ್ತ್ರಿ ಹಿರೇಮಠ, ಸಂಗೀತಗಾರ ಸೋಮಯ್ಯ ಸ್ವಾಮಿ, ತಬಲವಾದಕ ಮಹಾಂತೇಶ ಹರನಾಳ, ಸಾಹಿತಿ ಬಸವರಾಜ ಗೊರಜಿ(ಕೊಡಗಾನೂರ) ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.