ADVERTISEMENT

ಲಾಕ್‌ಡೌನ್‌: ತಪಾಸಣೆಗೆ ಸೀಮಿತವಾದ ಪೊಲೀಸರು!

​ಪ್ರಜಾವಾಣಿ ವಾರ್ತೆ
Published 11 ಮೇ 2021, 16:29 IST
Last Updated 11 ಮೇ 2021, 16:29 IST
ವಿಜಯಪುರ ನಗರದಲ್ಲಿ ಮಂಗಳವಾರ ಟ್ರಾಫಿಕ್‌ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಮಂಗಳವಾರ ಟ್ರಾಫಿಕ್‌ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಲಾಕ್‌ಡೌನ್‌ ಎರಡನೇ ದಿನವಾದ ಮಂಗಳವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಜೀವನ ಸ್ತಬ್ಧವಾಗಿತ್ತು. ಮೊದಲ ದಿನ ಲಾಠಿ ಹಿಡಿದು ಪ್ರತಾಪ ತೋರಿಸಿದ್ದ ಪೊಲೀಸರು ಮಂಗಳವಾರ ವಾಹನಗಳ ತಪಾಸಣೆ, ಎಚ್ಚರಿಕೆ ನೀಡಲಷ್ಟೇ ಸೀಮಿತವಾಗಿದ್ದರು.

ಬೆಳಿಗ್ಗೆ 10 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬಳಿಕ ಜನರು ರಸ್ತೆಗಳಿಯದೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ನಿಯಮಗಳನ್ನು ‍ಪಾಲಿಸಿದರು.

ಆಸ್ಪತ್ರೆ, ಔಷಧ ಅಂಗಡಿಗಳಿಗೆ ತೆರಳುವವರು ಮಾತ್ರ ನಗರದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಬಹುತೇಕ ಜನಜೀವನ ಸ್ತಬ್ಧವಾಗಿತ್ತು.

ADVERTISEMENT

314 ವಾಹನ ವಶಕ್ಕೆ:

ಜಿಲ್ಲೆಯಲ್ಲಿ ಮಂಗಳವಾರ ಲಾಕ್‌ಡೌನ್‌ ನಡುವೆಯೂ ಸಂಚರಿಸಿದ 314 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಾಸ್ಕ್‌ ಧರಿಸದೇ ಸಂಚರಿಸುತ್ತಿದ್ದವರ ವಿರುದ್ಧ 307 ಕೇಸುಗಳನ್ನು ದಾಖಲಿಸಿ, ರೂ 36,250 ದಂಡ ವಿಧಿಸಲಾಗಿದೆ ಹಾಗೂ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಒಂದು ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.