ADVERTISEMENT

Lok Sabha Election | ಸೋಲಾಪುರ: ರಾಮ ಸಾತಪುತೆ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:50 IST
Last Updated 25 ಮಾರ್ಚ್ 2024, 15:50 IST
ರಾಮ ಸಾತಪುತೆ
ರಾಮ ಸಾತಪುತೆ   

ಸೋಲಾಪುರ: ಸೋಲಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಶಾಸಕ ರಾಮ ಸಾತಪುತೆ ಅವರಿಗೆ ಲಭಿಸಿದೆ.

ಮಾಳಸಿರಸ ಮತ ಕ್ಷೇತ್ರದ ಹಾಲಿ ಶಾಸಕರಾದ ರಾಮ ಸಾತಪುತೆ, ಎಬಿವಿಪಿ ಮೂಲಕ ಗುರುತಿಸಿಕೊಂಡವರು. ರಾಷ್ಟ್ರೀಯ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾತಪುತೆ ಅವರು ಮೂಲತಃ ಬೀಡ್‌ ಜಿಲ್ಲೆಯ ಅಷ್ಟಾ ತಾಲ್ಲೂಕಿನ ದೋಯಿಥಾನ ಗ್ರಾಮದವರು.

ಲೋಕಸಭಾ ಚುನಾವಣೆಯಲ್ಲಿ ಸಾತಪುತ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಪ್ರಣತಿ ಶಿಂಧೆ ನಡುವೆ ಪೈಪೋಟಿ ನಡೆಯಲಿದೆ.

ADVERTISEMENT

‘ಸೋಲಾಪುರ ಬಹುಭಾಷೆಯ, ಬಹುಧರ್ಮಿಯ ಹಾಗೂ ಸರ್ವ ಧರ್ಮ ಸಮ ಭಾವನೆಯನ್ನು ಹೊಂದಿರುವ ನಗರ ಹಾಗೂ ಜಿಲ್ಲೆಯಾಗಿದ್ದು, ಎಲ್ಲರಿಗೂ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶವಿದೆ. ಸ್ಥಳೀಯರಾಗಿರಲಿ ಅಥವಾ ಹೊರಗಿನವರಾಗಲಿ ನಾನು ಸೋಲಾಪುರದ ಮಗಳಾಗಿ ತಮ್ಮನ್ನು ಸ್ವಾಗತಿಸುತ್ತೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಣತಿ ಶಿಂದೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.