ADVERTISEMENT

ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಕಳವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:53 IST
Last Updated 7 ಅಕ್ಟೋಬರ್ 2020, 14:53 IST
   

ವಿಜಯಪುರ: ನಗರದ ರೈಲು ನಿಲ್ದಾಣದಿಂದ ಕೆಎಫ್‌ಸಿಎಸ್‌ಸಿ ಗೋದಾಮಿಗೆ ಪಡಿತರ ಅಕ್ಕಿ ಚೀಲ ತುಂಬಿಕೊಂಡು ಹೊರಟ್ಟಿದ್ದ ಲಾರಿಯನ್ನೇ ಕಳವು ಮಾಡಲಾಗಿದೆ.

ಪಿ.ಎಂ.ಹೊಸೂರ ಎಂಬ ಪಡಿತರ ಅಕ್ಕಿ ಸಾಗಾಣಿಕೆ ಗುತ್ತಿಗೆದಾರರಿಗೆ ಸೇರಿದ ಕೆಎ 22 ಸಿ 0758 ಅಶೋಕ ಲೈಲ್ಯಾಂಡ್‌ ಲಾರಿಯಲ್ಲಿ₹4.80 ಲಕ್ಷ ಮೌಲ್ಯದ 21.1 ಟನ್‌ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೊರಟ್ಟಿದ್ದ ಚಾಲಕ ಮದಾರಸಾಬ್‌ ಮುಲ್ಲಾ ಕಳೆದ ಸೋಮವಾರ ಸಂಜೆ 6.30ಕ್ಕೆ ನಗರದ ಐಒಸಿ ಮುಂದೆ ಇರುವ ವಿನಾಯಕ ಪೆಟ್ರೋಲ್‌ ಪಂಪ್‌ನಲ್ಲಿ ಡೀಸೆಲ್‌ ಹಾಕಿಸಿ, ಅಲ್ಲಿಯೇ‌ ಎದುರು ಲಾರಿಯನ್ನು ನಿಲ್ಲಿಸಿ, ಮನೆಗೆ ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರು ದಿನ ಮಂಗಳವಾರ ಬೆಳಿಗ್ಗೆ ಚಾಲಕ ಸ್ಥಳಕ್ಕೆ ಬಂದು ನೋಡಿದಾಗ ಲಾರಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.