ADVERTISEMENT

ಸೊಲಾಪುರ | ಮನಸೂರೆಗೊಂಡ ಮಾಘವಾರಿಯ ಗೋಳ ರಿಂಗಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:29 IST
Last Updated 26 ಜನವರಿ 2026, 6:29 IST
ಸೊಲಾಪುರದಲ್ಲಿ ಮಾಘವಾರಿಯ ನಿಮಿತ್ತ ನಡೆದ ಅಶ್ವ ರಿಂಗಣದ ದೃಶ್ಯ
ಸೊಲಾಪುರದಲ್ಲಿ ಮಾಘವಾರಿಯ ನಿಮಿತ್ತ ನಡೆದ ಅಶ್ವ ರಿಂಗಣದ ದೃಶ್ಯ   

ಸೊಲಾಪುರ: ಮಾಘವಾರಿಯ ನಿಮಿತ್ತ ಇಲ್ಲಿಯ ಸಂತ ಜ್ಞಾನೇಶ್ವರ ಮಹಾರಾಜರು ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿಗಳು ಪಂಢರಪುರದ ಕಡೆ ಪ್ರಯಾಣ ಬೆಳೆಸಿದವು. 200ವರ್ಷಗಳಿಗಿಂತ ಹೆಚ್ಚು ಕಾಲದಿಂದ ವಾರಿಯ ಪರಂಪರೆ ಅದೇ ಭಕ್ತಿಭಾವದಿಂದ ಮುಂದುವರಿದಿದೆ.

ಸೊಲಾಪುರ ನಗರದಲ್ಲಿನ 33 ದಿಂಡಿಗಳು, ಸುತ್ತಮುತ್ತಲಿನ 25 ದಿಂಡಿಗಳು ಹಾಗೂ 25 ಭಜನಾ ಮಂಡಳಿಗಳ ಉಪಸ್ಥಿತಿಯಲ್ಲಿ ಶನಿವಾರ ಸಂತ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿಗೆ ನಿಲೋಬಾ ಜಾಂಭಳೆ ಮಹಾರಾಜ, ಸುಮಂತ ಶೆಳಕೆ ಅವರಿಂದ ಪೂಜೆ ನಡೆಯಿತು. ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿಗೆ ಪಾಂಡುರಂಗ ಜಗತಾಪ, ನಾಮದೇವ ರಣದಿವೆ ಹಾಗೂ ಭೂಷಣ ಜಾಧವ ಅವರಿಂದ ಪೂಜೆ ನೆರವೇರಿತು. ಪದ್ಮಶಾಲಿ ಜ್ಞಾತಿ ಸಂಸ್ಥೆ ಸೊಲಾಪುರದ ಸುರೇಶ ಫಲಮಾರಿ (ಅಧ್ಯಕ್ಷ) ಅವರ ವತಿಯಿಂದ ಎಲ್ಲ ವೀಣೆಕರಿ ಮಹಾರಾಜರಿಗೆ ಸನ್ಮಾನ ಮಾಡಲಾಯಿತು.

‘ನಾಮಾ ಮನಾ ಕೇಶವರಾಜಾ, ಕೇಲಾ ನೇಮ ಚಾಳವಿ ಮಾಜಾ’ ಎಂಬ ಸಂತವಾಕ್ಯದಂತೆ ನಿತ್ಯನೇಮ ಭಜನೆ ಮಾಡಿಕೊಂಡು ಪಲ್ಲಕ್ಕಿ ಪ್ರಯಾಣಕ್ಕೆ ಹೊರಟಿತು. ‘ಜ್ಞಾನೋಬಾ ತುಕಾರಾಮ’ ಎಂಬ ಭಜನೆಗಳೊಂದಿಗೆ ಪಲ್ಲಕ್ಕಿ ನಾರ್ತ್‌ಕೋಟ್ ಪ್ರೌಢಶಾಲೆ ಮೈದಾನ, ಪಾರ್ಕ್ ಚೌಕ್, ಸೊಲಾಪುರಕ್ಕೆ ಆಗಮಿಸಿತು. ಬಳಿಕ ಅಖಿಲ ಭಾವಿಕ ವಾರಕರಿ ಮಂಡಳಿಯ ಜ್ಯೋತಿರಾಮ ಚಾಂಗಭಳೆ (ಪ್ರದೇಶ ಅಧ್ಯಕ್ಷ), ಬಾಳಿರಾಮ ಜಾಂಭಳೆ (ರಾಷ್ಟ್ರೀಯ ಕಾರ್ಯದರ್ಶಿ), ಸಂಜಯ ಪವಾರ (ನಗರ ಅಧ್ಯಕ್ಷ), ಮೋಹನ ಶೆಳಕೆ (ಪ್ರದೇಶ ಕಾರ್ಯದರ್ಶಿ) ಸೇರಿದಂತೆ ಪದಾಧಿಕಾರಿಗಳು ಗೋಳ ರಿಂಗಣವನ್ನು ನಡೆಸಿದರು.

ADVERTISEMENT

ನಾಮದೇವ ಪೂಲಗಮ್, ವಿಷ್ಣುಪಂತ ಮೋರೆ ಮಹಾರಾಜರು ಹಾಗೂ ಉಪಸ್ಥಿತ ಗಣ್ಯರ ಕೈಯಿಂದ ರಿಂಗಣದಲ್ಲಿನ ಅಶ್ವ ಪೂಜೆ ನೆರವೇರಿಸಲಾಯಿತು. ಗಣೇಶ ಭಂಡಾರೆ, ಗಜಾನನ ಜಗತಾಪ (ಚೋಪದಾರ್) ಅವರನ್ನು ಸನ್ಮಾನಿಸಲಾಯಿತು.

ಆನಂತರ ಧ್ವಜ (ಪತಾಕೆ) ಧಾರಿಗಳೊಂದಿಗೆ ಗೋಳ ರಿಂಗಣ ಸಮಾರಂಭಕ್ಕೆ ಚಾಲನೆ ದೊರಕಿತು. ಮೈದಾನದಲ್ಲಿ ಅಪಾರ ಚೈತನ್ಯ ಮೂಡಿತು. ಪರಂಪರೆ ಅನುಗುಣವಾಗಿ ಇತರ ರಿಂಗಣಗಳು ಪೂರ್ಣಗೊಂಡ ಬಳಿಕ ಅಂತಿಮವಾಗಿ ಅಶ್ವ ರಿಂಗಣ ನಡೆಯಿತು. ಈ ಅದ್ಭುತ ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಮಹಿಳಾ ಭಕ್ತರು, ಪುರುಷರು, ಆಬಾಲ ವೃದ್ಧರು ಹಾಜರಿದ್ದರು.

ಅಲ್ಲಿಂದ ಎಲ್ಲಾ ದಿಂಡಿಗಳ ವಾರಕರಿಗಳು ನಗರದ ಸಾಠೆ ಚಾಳೆಯ ಮಹಾದೇವ ದೇವಸ್ಥಾನಕ್ಕೆ ಆಗಮಿಸಿ, ಆರತಿಯ ನಂತರ ಸಮಾರೋಪ ಮಾಡಲಾಯಿತು. ನಂತರ ಭಾನುವಾರ ಬೆಳಿಗ್ಗೆ ಸೊಲಾಪುರದ ಲಕ್ಷ್ಮೀಪೇಟೆಯ ಗವಳಿ ವಸ್ತಿಯ ವಿಠ್ಠಲ ಮಂದಿರದಿಂದ ತಿರ್ಹೆ ಮಾರ್ಗವಾಗಿ ಪಲ್ಲಕ್ಕಿ ಸಮಾರಂಭ ಮುಂದಕ್ಕೆ ಸಾಗಿತು.

ಈ ಸಮಾರಂಭದ ಸೂತ್ರಸಂಚಾಲನೆ ಹಾಗೂ ಮಾರ್ಗದರ್ಶನವನ್ನು ಸುಧಾಕರ ಇಂಗಳೆ ಮಹಾರಾಜರು (ರಾಷ್ಟ್ರೀಯ ಅಧ್ಯಕ್ಷ) ವಹಿಸಿಕೊಂಡಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಬಂಡೋಪಂತ ಕುಲಕರ್ಣಿ (ಜಿಲ್ಲಾ ಘಟಕ ಅಧ್ಯಕ್ಷ), ಕಿಸನ್ ಕಾಪ್ಸೆ (ಪ್ರದೇಶ ಉಪಾಧ್ಯಕ್ಷ), ಸಚಿನ ಗಾಯಕವಾಡ (ಉಪಾಧ್ಯಕ್ಷ), ತಾನಾಜಿ ಬೆಲೆರಾವ್ (ಸಂಘಟಕ), ಕುಮಾರ ಗಾಯಕವಾಡ ಸೇರಿದಂತೆ ಇತರ ಪದಾಧಿಕಾರಿಗಳು ಶ್ರಮಿಸಿದರು.

ಸೊಲಾಪುರದಲ್ಲಿ ಮಾಘವಾರಿಯ ನಿಮಿತ್ತ ನಡೆದ ಅಶ್ವ ರಿಂಗಣದ ದೃಶ್ಯ
ಸೊಲಾಪುರದಲ್ಲಿ ಮಾಘವಾರಿಯ ನಿಮಿತ್ತ ನಡೆದ ಅಶ್ವ ರಿಂಗಣದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.