ADVERTISEMENT

ವಿಜಯಪುರ: ಪೊಲೀಸರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಎಸ್‌.ಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:13 IST
Last Updated 1 ಜೂನ್ 2025, 15:13 IST
<div class="paragraphs"><p>ಸೇವಾ ನಿವೃತ್ತಿ ಹೊಂದಿದ ಪೊಲೀಸ್‌ ಸಿಬ್ಬಂದಿ&nbsp;ವಿಜಯಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಫೋಟೊಗೆ ಫೋಸ್‌ ನೀಡಿದರು&nbsp;</p></div>

ಸೇವಾ ನಿವೃತ್ತಿ ಹೊಂದಿದ ಪೊಲೀಸ್‌ ಸಿಬ್ಬಂದಿ ವಿಜಯಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಫೋಟೊಗೆ ಫೋಸ್‌ ನೀಡಿದರು 

   

ವಿಜಯಪುರ: ನಿವೃತ್ತಿ ಜೀವನದಲ್ಲಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡು ಒಳ್ಳೆಯ ಜೀವನ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ ನೀಡಿದರು.

ಪೊಲೀಸ್‌ ಇಲಾಖೆಯ 15 ಪೊಲೀಸ್‌ ಸಿಬ್ಬಂದಿ ನಿವೃತ್ತರಾದ ಅಂಗವಾಗಿ ನಗರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಿವೃತ್ತರಾಗಿದ್ದೇವೆ ಎಂದು ಭಾವಿಸದೇ ಸಮಾಜದ ಅಭಿವೃದ್ದಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಉತ್ತಮ ಕಾರ್ಯ ಮಾಡಬೇಕು’ ಎಂದರು.

ADVERTISEMENT

ನಿವೃತ್ತರಾದ ಹೋರ್ತಿ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್.ಎಸ್. ಮಾಳೆಗಾಂವ, ವಿಜಯಪುರ ಗ್ರಾಮೀಣ ಠಾಣೆಯ ಎಸ್.ಎ.ಉಪ್ಪಾರ, ಆರ್.ಡಿ.ಕುಸೂರ, ಟಿ.ಎಂ.ಶೇಲಾರ, ಸಿ.ಕೆ.ರಾಠೋಡ, ಸಿ.ಕೆ.ದುದಗಿ, ಎಸ್.ಎಚ್.ರಾಠೋಡ, ಡಿ.ಎಚ್. ನಧಾಫ್, ಎನ್.ಎಂ. ಹಿರೇಮಠ, ಎಂ.ಎಸ್.ಬಿರಾದಾರ, ಎಸ್.ಕೆ.ಸಿಂಗೆ, ಎಂ.ಬಿ.ಪಡೇಸೂರ, ಎ.ಎಸ್. ಪಾಟೀಲ ಆರ್.ಎಸ್. ಪ್ರಸಾದ ಹಾಗೂ ಎಚ್.ಎಸ್.ಮುಲ್ಲಾ ಅವರಿಗೆ ಸೇವಾ ಪ್ರಮಾಣಪತ್ರ ನೀಡಿ, ಗೌರವಿಸಿ ಬೀಳ್ಕೊಡಲಾಯಿತು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿಎಸ್‍ಪಿ ಉಪಾಸೆ, ಸಿಪಿಐ ಪರುಶರಾಮ ಮನಗೂಳಿ, ರವಿ ಯಡವನ್ನವರ, ಶಿವರಾಜ ಮಣ್ಣೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.