ವಿಜಯಪುರ: ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಶುಕ್ರವಾರ ನಗರದ ಪ್ರೇರಣಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.
ಸಂವಾದಾತ್ಮಕ ಉಪನ್ಯಾಸ, ಮುಟ್ಟಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸುಸ್ಥಿರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಬಳಕೆಯ ಕುರಿತು ವಿವರಣೆ ನೀಡಿ ಉಪಯುಕ್ತ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಪ್ರೇರಣಾ ಗ್ರೂಪ್‍ನ ಅಧ್ಯಕ್ಷ ಅರವಿಂದ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಅರಿವು ಮತ್ತು ಆತ್ಮವಿಶ್ವಾಸವನ್ನು ತರುವಲ್ಲಿ ಸ್ವಯಂಪ್ರೇರಿತ ಪ್ರಯತ್ನಕ್ಕಾಗಿ ಯುವ ವೈದ್ಯರ ತಂಡ ಭಾಗಿಯಾಗಿರುವುದು ಸಂತೋಷದ ಸಂಗತಿ ಎಂದರು.
ಡಾ.ಮಧುರಿಮಾ, ಡಾ.ಶ್ರೇಯಾ, ಡಾ.ಸುವರ್ಣ, ಡಾ.ಸುಷ್ಮಾ, ಡಾ.ಸೃಷ್ಟಿ, ಡಾ.ಸ್ಪೂರ್ತಿ ಎಸ್.ವೈ., ಡಾ.ಸ್ಪೂರ್ತಿ ವಿ.ಕೆ., ಡಾ.ವಿನೀತ್ ಹೊನ್ನುಟಗಿ, ಡಾ.ಸ್ಮಿಥೂನ್ ವಿ.ಟಿ., ಡಾ.ಮೇಘನಾ ಪುರುಷೋತ್ತಮ್ ಪಾಲ್ಗೊಂಡಿದ್ದರು.
ನಿರ್ದೇಶಕ ಸುಕೃತ್ ಪಾಟೀಲ್ ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.