
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ಕೃಪೆ: ಎಐ
ವಿಜಯಪುರ: ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 11.43ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.6 ಭೂಕಂಪನದ ತೀವ್ರತೆ ದಾಖಲಾಗಿದೆ.
ಭೂಮಿ ಒಳಗಿನಿಂದ ಸ್ಪೋಟದ ಸದ್ದು ಕೇಳಿಬಂದಿಂದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
‘ಭೂಕಂಪನ ತೀವ್ರತೆ ಕಡಿಮೆಯಿದ್ದು, ಈ ರೀತಿಯ ಭೂಕಂಪವು ಸ್ಥಳೀಯರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.ಭೂಕಂಪನ ಕೇಂದ್ರಬಿಂದುವು ಭೂಕಂಪನ ವಲಯ ಮೂರರಲ್ಲಿ ಬರುವುದರಿಂದ ಜನರು ಭಯಭೀತರಾಗಬೇಕಾಗಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.