ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರದ ಹನುಮನಿಗೆ ಶುಕ್ರವಾರ, ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಗಳು 108 ಕೆಜಿ ಜೇನುತುಪ್ಪ ಹಾಗೂ 108 ಲೀಟರ್ ಹಾಲಿನ ಅಭಿಷೇಕ ನೆರವೇರಿಸಿದರು.
ಬೆಳಿಗ್ಗೆ 9 ಕ್ಕೆ ಆರಂಭಗೊಂಡ ಅಭಿಷೇಕ 10 ಕ್ಕೆ ಪೂರ್ಣಗೊಂಡಿತು. ಅಭಿಷೇಕ ಮಾಡುವಾಗ 70 ಕ್ಕೂ ಅಧಿಕ ಪಂಡಿತರು, ವಿವಿಧ ಮಂತ್ರಘೋಷಗಳನ್ನು ಪಠಿಸಿದರು. ನಂತರ ಶ್ರೀಗಳು ನಾರಾಯಣ ಒಡೆಯರ ಅವರ ಮನೆಯಲ್ಲಿ ಮೂಲರಾಮದೇವರ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ವಿವಿಧ ಪಂಡಿತರು 16 ಸರ್ಜಗಳ ಸುಮಧ್ವ ವಿಜಯ ಪಾರಾಯಣ ಮಾಡಿದರು.
ಶ್ರೀಗಳು ಆಶೀರ್ವಚನ ನೀಡಿದರು.ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಂತ ಓಂಕಾರ, ಯಲಗೂರದಪ್ಪ ಪೂಜಾರಿ, ಬಿಂದುಮಾಧವಾಚಾರ್ಯ ನಾಗಸಂಪಿಗೆ, ವೆಂಕಟೇಶ ಒಡೆಯರ, ನರಸಿಂಹ ಆಲೂರ, ಪಾಂಡುರಂಗಾಚಾರ್ಯ ಹೊಸೂರ, ಕಲ್ಯಾಣಿ ಒಡೆಯರ, ಗೋಪಾಲಾಚಾರ್ಯ ಹಿಪ್ಪರಗಿ, ನರಸಿಂಹ ಆಲೂರ, ವಿಠ್ಠಲಾಚಾರ್ಯ ಗದ್ದನಕೇರಿ, ಕೃಷ್ಣ ಕಟ್ಟಿ, ಗುರುರಾಜಾಚಾರ್ಯ ಜೋಶಿ, ಗೋಪಾಲ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಆನಂದ ಪೂಜಾರಿ ಮತ್ತೀತರರು ಇದ್ದರು.
ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.